ಕೊಪ್ಪಳದ ಗಂಗಾನಾಳ ಬಳಿ ಹೊಲಕ್ಕೆ ನುಗ್ಗಿದ ಬಸ್, ಕೂದಲೆಳೆಯ ಅಂತರದಲ್ಲಿ ತಪ್ಪಿದ ದುರಂತ
ಕೊಪ್ಪಳ: ಕನಕಗಿರಿ (Kanakagiri) ಮಾರ್ಗವಾಗಿ ಕೊಪ್ಪಳಕ್ಕೆ (Koppal) ತೆರಳುತ್ತಿದ್ದ ಬಸ್ ಮುಂಭಾಗದ ಚಕ್ರದ ಕಮಾನ್ ಸ್ಪ್ರಿಂಗ್ ಪಟ್ಟಿಯ ನಟ್ ಕಿತ್ತಿದ ಪರಿಣಾಮ ಹೊಲಕ್ಕೆ ನುಗ್ಗಿ ದುರಂತವೊಂದು ತಪ್ಪಿರುವ ಘಟನೆ ಗಂಗಾನಾಳ...

ಕನಕಗಿರಿಯಿಂದ ಕೊಪ್ಪಳಕ್ಕೆ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್‌ನ ಮುಂಭಾಗದ ಚಕ್ರದ ನಟ್ ಕಿತ್ತಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಗಂಗಾನಾಳ ಸಮೀಪ ಈ ಘಟನೆ ನಡೆದಿದ್ದು, ಬಸ್ ರಸ್ತೆಯ ಪಕ್ಕದ ಹೊಲಕ್ಕೆ ನುಗ್ಗಿದೆ. ಬಸ್‌ನ ವೇಗ ಕಡಿಮೆಯಿದ್ದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿ ಎಲ್ಲರನ್ನು ಸುರಕ್ಷಿತವಾಗಿ ಹೊರಬರಲು ಸಹಕರಿಸಿದ್ದಾರೆ.




