ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಹಾಸನ: ಹಾಸನಾಂಬ ಜಾತ್ರೆಯಲ್ಲಿ 29.55 ಕೋಟಿ ರೂ. ಆದಾಯ, 30 ಲಕ್ಷ ಭಕ್ತರ ಭೇಟಿ

– 30,06,000 ಭಕ್ತರಿಂದ ದೇವಿಯ ದರ್ಶನ ಹಾಸನ: ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ (Hasanamba Jatra Mahotsava) ಹೊಸ ದಾಖಲೆ ಬರೆದಿದೆ. ಒಟ್ಟು 30,06,000 ಭಕ್ತರು ದೇವಿ ದರ್ಶನ ಪಡೆದಿದ್ದು, ಎಲ್ಲಾ ಮೂಲಗಳಿಂದ ಒಟ್...

· ಹಾಸನ
ದಾಖಲೆ ಬರೆದ ಹಾಸನಾಂಬ ಜಾತ್ರಾ ಮಹೋತ್ಸವ – 29.55 ಕೋಟಿ ರೂ. ಆದಾಯ ಸಂಗ್ರಹ
ಹಂಚಿಕೊಳ್ಳಿ:

ಹಾಸನದಲ್ಲಿ ನಡೆದ ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಒಟ್ಟು 30,06,000 ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ. ದರ್ಶನ ಟಿಕೆಟ್ ಮಾರಾಟ, ಹುಂಡಿ ಕಾಣಿಕೆ, ಲಾಡು ಪ್ರಸಾದ ಮತ್ತು ಇತರೆ ಮೂಲಗಳಿಂದ ಒಟ್ಟಾರೆಯಾಗಿ 29,55,27,852 ರೂಪಾಯಿ ಆದಾಯ ಹರಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 4 ಕೋಟಿ ರೂಪಾಯಿ ಹೆಚ್ಚು ಆದಾಯ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಭಕ್ತರು ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಸಹ ಕಾಣಿಕೆಯಾಗಿ ಅರ್ಪಿಸಿದ್ದಾರೆ.

ಹಂಚಿಕೊಳ್ಳಿ: