ಕೊಪ್ಪಳದ ಅಂಜನಾದ್ರಿ ಬೆಟ್ಟದ ಕಚೇರಿಗಳಿಗೆ ಬೀಗ ಜಡಿದ ವಿದ್ಯಾದಾಸ್ ಬಾಬಾ
ಕೊಪ್ಪಳ: ಅಂಜನಾದ್ರಿ ಬೆಟ್ಟದಿಂದ (Anjanadri Hills) ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಹೊರಕ್ಕೆ ಕಳಿಸಿ, ಆಡಳಿತ ಕಚೇರಿ ಸೇರಿ ಎಲ್ಲ ಕಚೇರಿಗಳಿಗೆ ವಿದ್ಯಾದಾಸ್ ಬಾಬಾ ಬೀಗ ಜಡಿದಿದ್ದಾರೆ. ಆಂಜನೇಯನ ಜನ್ಮ ಸ್ಥಳ ಎಂದೆ ಖ...

ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಅಂಜನಾದ್ರಿ ಪರ್ವತವನ್ನು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ದೇವಸ್ಥಾನ ಎಂದು ಘೋಷಿಸಿದ್ದ ಜಿಲ್ಲಾಡಳಿತದ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ರದ್ದುಪಡಿಸಿದೆ. ಈ ಬೆಳವಣಿಗೆಯ ನಂತರ ವಿದ್ಯಾದಾಸ್ ಬಾಬಾ ಅವರು ದೇವಸ್ಥಾನದ ಆಡಳಿತ ಕಚೇರಿ, ಉಗ್ರಾಣ, ಸಂಸ್ಕೃತ ಪಾಠಶಾಲೆ ಹಾಗೂ ಅಡುಗೆ ಕೋಣೆ ಸೇರಿದಂತೆ ಒಟ್ಟು ಎಂಟು ಕೊಠಡಿಗಳಿಗೆ ಬೀಗ ಜಡಿದಿದ್ದಾರೆ. ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಬೆಟ್ಟದಿಂದ ಹೊರಕ್ಕೆ ಕಳುಹಿಸಲಾಗಿದ್ದು, ಅವರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಇದೀಗ ದೇವಸ್ಥಾನದ ಸಂಪೂರ್ಣ ನಿಯಂತ್ರಣವನ್ನು ವಿದ್ಯಾದಾಸ್ ಬಾಬಾ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.




