ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಕೋಲ್ಕತ್ತ: ಶಾಲಾ ಪಠ್ಯದಿಂದ ಸಿಂಗೂರು ಚಳವಳಿ ಕೈಬಿಟ್ಟು ಶ್ಯಾಮ ಪ್ರಸಾದ್‌ ಮುಖರ್ಜಿ ಪಾಠ ಸೇರ್ಪಡೆ

ಕೋಲ್ಕತ್ತ: ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ, ಸಿಂಗೂರು ಭೂಸ್ವಾಧೀನ ವಿರೋಧಿ...

ಚಳವಳಿಯ ಅಧ್ಯಾಯ ತೆಗೆದು ಶ್ಯಾಮ ಪ್ರಸಾದ್‌ ಮುಖರ್ಜಿ ವಿಚಾರ ಸೇರಿಸಲು ಮುಂದಾದ ಬಂಗಾಳ
ಹಂಚಿಕೊಳ್ಳಿ:

ಪಶ್ಚಿಮ ಬಂಗಾಳದ ಶಾಲಾ ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ತರಲು ಸರ್ಕಾರ ನಿರ್ಧರಿಸಿದ್ದು, ಎಂಟನೇ ತರಗತಿಯ ಪಠ್ಯದಲ್ಲಿದ್ದ ಸಿಂಗೂರು ಭೂಸ್ವಾಧೀನ ವಿರೋಧಿ ಚಳವಳಿಯ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಇದರ ಬದಲಿಗೆ ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ ಪ್ರಸಾದ್‌ ಮುಖರ್ಜಿ ಅವರ ಜೀವನಗಾಥೆಯನ್ನು ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ದೀಪಕ್‌ ಬರ್ಮನ್‌ ತಿಳಿಸಿದ್ದಾರೆ. ಇದರೊಂದಿಗೆ ಆರನೇ ತರಗತಿಯಿಂದ ಕನ್ಯಾಶ್ರೀ ಯೋಜನೆಯ ಪಾಠವನ್ನು ಕೈಬಿಡಲು ಸಮಿತಿ ಶಿಫಾರಸು ಮಾಡಿದೆ. ಇನ್ನು ಮುಂದೆ ಪಠ್ಯಪುಸ್ತಕಗಳ ಆರಂಭದಲ್ಲಿ ವಂದೇ ಮಾತರಂ ಗೀತೆಯನ್ನು ಮುದ್ರಿಸಲಾಗುವುದು ಹಾಗೂ ಐದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ವಿಷಯವನ್ನು ಪರಿಚಯಿಸಲಾಗುವುದು.

ಹಂಚಿಕೊಳ್ಳಿ: