ಕೋಲಾರದಲ್ಲಿ ಒಡವೆ ಪಾಲಿಶ್ ನೆಪದಲ್ಲಿ 8 ಗ್ರಾಂ ಚಿನ್ನ ದೋಚಿದ ಬಿಹಾರದ ಆರೋಪಿ ಬಂಧನ
ಕೋಲಾರ: ಒಡವೆಯನ್ನು ಪಾಲಿಶ್ (Jewelry Polishing) ಮಾಡಿ ಕೊಡುವ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 8 ಗ್ರಾಂ ಚಿನ್ನ ವಂಚಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಶ್ರೀನಿವಾಸಪುರ (Srinivaspura) ತಾಲೂಕಿನ ಮಲ್ಲೆಪಲ...

ಕೋಲಾರದ ಶ್ರೀನಿವಾಸಪುರ ತಾಲೂಕಿನ ಮಲ್ಲೆಪಲ್ಲಿ ಗ್ರಾಮದ ಪಲ್ಲವಿ ಎಂಬ ಮಹಿಳೆಗೆ ಚಿನ್ನದ ಒಡವೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ವಂಚನೆ ನಡೆದಿದೆ. ಅಕ್ಟೋಬರ್ 20ರಂದು ಅಪರಿಚಿತನೊಬ್ಬ 60 ರೂಪಾಯಿಗೆ ಕೆಲಸ ಮಾಡಿಕೊಡುವುದಾಗಿ ಹೇಳಿ 25 ಗ್ರಾಂ ಚಿನ್ನದ ಸರವನ್ನು ಪಡೆದು 8 ಗ್ರಾಂ ಚಿನ್ನ ಕಳವು ಮಾಡಿದ್ದನು. ಈ ಕುರಿತು ಅಕ್ಟೋಬರ್ 23ರಂದು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಬಿಹಾರ ಮೂಲದ ಮುಖೇಶ್ ಕುಮಾರ್ ಎಂಬಾತನನ್ನು ಬಂಧಿಸಿ, ಆತನ ವಶದಲ್ಲಿದ್ದ 1.20 ಲಕ್ಷ ರೂಪಾಯಿ ಮೌಲ್ಯದ 8 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.




