ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ವಾಟರ್ ಹೀಟರ್ ಮುಟ್ಟಿ 8 ವರ್ಷದ ಬಾಲಕನ ಸಾವು

ಚಿಕ್ಕಮಗಳೂರು: ವಾಟರ್ ಹೀಟರ್ (Water Heater) ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ (Sakharayapatna) ನಡೆದಿದೆ. ಈತ 2ನೇ ತರಗತಿ ಬಾಲಕ ನೀಲಾಂಶ್ (8) ಮೃತ ದುರ್ದೈವ...

· ಚಿಕ್ಕಮಗಳೂರು
ವಾಟರ್ ಹೀಟರ್ ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ದುರ್ಮರಣ
ಹಂಚಿಕೊಳ್ಳಿ:

ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಭಾನುವಾರ ನೀಲಾಂಶ್ ಎಂಬ ಎರಡನೇ ತರಗತಿಯ ಬಾಲಕ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾನೆ. ಸ್ನಾನಕ್ಕಾಗಿ ಬಕೆಟ್‌ನಲ್ಲಿ ವಾಟರ್ ಹೀಟರ್ ಹಾಕಿ ನೀರು ಕಾಯಿಸುತ್ತಿದ್ದಾಗ ಬಾಲಕ ಅದನ್ನು ಮುಟ್ಟಿದ್ದರಿಂದ ವಿದ್ಯುತ್ ಪ್ರವಾಹ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಪೋಷಕರು ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ: