ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಹುಬ್ಬಳ್ಳಿ, ಬೆಳಗಾವಿ ಪಾಲಿಕೆ ಹಾಗೂ ಬೆಂಗಳೂರು ಮೆಟ್ರೋಗೆ ಬಾಂಬ್ ಬೆದರಿಕೆ ಇ-ಮೇಲ್

ಬೆಳಗಾವಿ / ಹುಬ್ಬಳ್ಳಿ: ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಹಾನಗರ ಪಾಲಿಕೆಗಳಿಗೆ ಖಲಿಸ್ತಾನ್ ಉಗ್ರರ ಹೆಸರಿನಲ್ಲಿ ಆತಂಕಕಾರಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ರಾಜ್ಯದಲ್ಲಿ ತೀವ್ರ ಆತಂಕ ಮೂಡಿಸ...

· ಧಾರವಾಡ
ಬೆಂಗಳೂರು ಮೆಟ್ರೋ ಬ್ಲಾಸ್ಟ್ ಮಾಡ್ತೇವೆ, ದಿಲ್‌ಜಿತ್ ಶೋ ಟಾರ್ಗೆಟ್ ಮಾಡಿ ಹುಬ್ಬಳ್ಳಿ-ಬೆಳಗಾವಿ ಪಾಲಿಕೆಗಳಿಗೆ ಬಾಂಬ್ ಬೆದರಿಕೆ: ಅಮಿತಾಭ್ ಬಚ್ಚನ್ ಮನೆ ಮೇಲೂ ಉಗ್ರರ ಕಣ್ಣು!
ಹಂಚಿಕೊಳ್ಳಿ:

ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಹಾನಗರ ಪಾಲಿಕೆಗಳ ಕಚೇರಿಗಳಿಗೆ ಖಲಿಸ್ತಾನ್ ಉಗ್ರರ ಹೆಸರಿನಲ್ಲಿ ಆತಂಕಕಾರಿ ಇ-ಮೇಲ್ ಸಂದೇಶ ಬಂದಿದೆ. ಈ ಬೆದರಿಕೆಯಲ್ಲಿ ಬೆಂಗಳೂರು ಮೆಟ್ರೋ, ನವೆಂಬರ್ 29ರಂದು ನಡೆಯಲಿರುವ ದಿಲ್‌ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ಮತ್ತು ಅಮಿತಾಭ್ ಬಚ್ಚನ್ ಅವರ ಮುಂಬೈ ನಿವಾಸವನ್ನು ಗುರಿಯಾಗಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎರಡೂ ಪಾಲಿಕೆ ಕಚೇರಿಗಳಲ್ಲಿ ಬಾಂಬ್ ಪತ್ತೆ ದಳದವರು ತೀವ್ರ ತಪಾಸಣೆ ನಡೆಸಿದ್ದು, ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ಸೈಬರ್ ಪೊಲೀಸರು ಈ ಇ-ಮೇಲ್ ಮೂಲವನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಹಂಚಿಕೊಳ್ಳಿ: