ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಹಾಸನದಲ್ಲಿ ವಿಜಯೇಂದ್ರ ಆರೋಪ: ಎಂಎಲ್‌ಸಿ ಚುನಾವಣೆ ಸೋಲಿನಿಂದ ಹಾಲಿನ ದರ ಏರಿಕೆ

ಹಾಸನ: ವಿಧಾನ ಪರಿಷತ್ ಚುನಾವಣೆ (MLC Election) ಫಲಿತಾಂಶ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಸೋತಿರುವ ಪರಿಣಾಮವಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಲಿನ ದರ ಎಂಟು ರೂ. ಏರಿಕೆ ನಿರ್ಧಾರ ಮಾಡಿದ...

· ಹಾಸನ
MLC ಚುನಾವಣೆ ಸೋತಿದ್ದಕ್ಕೆ ಸಿಎಂ ಹಾಲಿನ ದರ ಏರಿಕೆ ನಿರ್ಧಾರ ಮಾಡಿದಂತೆ ಕಾಣಿಸ್ತಿದೆ – ವಿಜಯೇಂದ್ರ
ಹಂಚಿಕೊಳ್ಳಿ:

ಹಾಸನದ ಆಲೂರು ತಾಲ್ಲೂಕಿನ ದಿಂಡಿಘಟ್ಟ ಗ್ರಾಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿರುವುದು ಆ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ತಿಳಿಸಿದ್ದಾರೆ. ಈ ಸೋಲಿನ ಹತಾಶೆಯಿಂದಲೇ ರಾಜ್ಯ ಸರ್ಕಾರ ಹಾಲಿನ ದರವನ್ನು ಎಂಟು ರೂಪಾಯಿ ಹೆಚ್ಚಿಸಿದೆ ಎಂದು ಅವರು ಆರೋಪಿಸಿದ್ದಾರೆ. ರೈತರಿಗೆ ಏಳು ರೂಪಾಯಿ ಹೆಚ್ಚುವರಿ ಹಣ ನೀಡುವುದನ್ನು ಸ್ವಾಗತಿಸಿದ ಅವರು, ಗ್ರಾಹಕರ ಮೇಲೆ ಹೊರೆ ಹಾಕುವ ಬದಲು ಸರ್ಕಾರವೇ ಆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿನ ಬರಗಾಲದ ಪರಿಸ್ಥಿತಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆಯೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಂಚಿಕೊಳ್ಳಿ: