ಹಾಸನದಲ್ಲಿ ಎರಡನೇ ದಿನವೂ ಮುಂದುವರಿದ ಹಾಸನಾಂಬೆ ದೇವಿಯ ಭಕ್ತರ ದರ್ಶನ
ಹಾಸನ: ಹಾಸನಾಂಬ ದೇವಿ (Hasanamba Jatre) ಸಾರ್ವಜನಿಕ ದರ್ಶನಕ್ಕೆ ಎರಡನೇ ದಿನವೂ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ. ಮಧ್ಯರಾತ್ರಿಯಿಂದಲೂ ಸರತಿ ಸಾಲಿನಲ್ಲಿ ಭಕ್ತರು ಕಾದು ನಿಂತಿದ್ದಾರೆ. 300 ರೂ. ವಿಶೇಷ...

ಹಾಸನಾಂಬೆ ದೇವಾಲಯದ ಬಾಗಿಲು ತೆರೆದ ಎರಡನೇ ದಿನವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ನಸುಕಿನ ಜಾವದಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಬೆಳಿಗ್ಗೆ 6 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. 300 ರೂ. ವಿಶೇಷ ದರ್ಶನದ ಸಾಲಿನಲ್ಲಿ ಜನದಟ್ಟಣೆ ಕಂಡುಬಂದಿದ್ದು 1000 ರೂ. ದರ್ಶನದ ಸಾಲು ಖಾಲಿ ಇತ್ತು. ಭಕ್ತರ ನಿರ್ವಹಣೆಗಾಗಿ ಎಸ್‌ಪಿ ಶುಭನ್ವಿತಾ ಅವರು ದೇವಾಲಯದ ಆವರಣದಲ್ಲಿ ಉಪಸ್ಥಿತರಿದ್ದು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.




