ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಹಾಸನ: ಜಿಲ್ಲಾ ಖಜಾನೆಯಿಂದ ಹಾಸನಾಂಬ ದೇವಾಲಯಕ್ಕೆ ದೇವಿಯ ಒಡವೆಗಳ ಮೆರವಣಿಗೆ

ಹಾಸನ: ಅ.29 ರಿಂದ ನ.11 ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವದ ಹಿನ್ನಲೆ, ಇಂದು (ಅ.26) ದೇವಾಲಯಕ್ಕೆ (Hasanamba Temple) ದೇವಿಯ ಒಡವೆಗಳನ್ನು (Gold Jewelry) ರವಾನೆ ಮಾಡಲಾಗಿದೆ. ಹಾಸನ (Hassan) ನಗರದ ಸಾಲಗಾಮೆ...

· ಹಾಸನ
ಖಜಾನೆಯಿಂದ ಭಾರೀ ಭದ್ರತೆಯಲ್ಲಿ ಹಾಸನಾಂಬಾ ದೇವಾಲಯಕ್ಕೆ ಒಡವೆಗಳ ರವಾನೆ
ಹಂಚಿಕೊಳ್ಳಿ:

ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ನಡೆಯಲಿರುವ ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ, ದೇವಿಯ ಒಡವೆಗಳನ್ನು ಇಂದು ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ಸ್ಥಳಾಂತರಿಸಲಾಯಿತು. ಎಸಿ ಜಗದೀಶ್ ಗಂಗಣ್ಣನವರ್, ತಹಶೀಲ್ದಾರ್ ಗೀತಾ ಮತ್ತು ಪ್ರಧಾನ ಅರ್ಚಕ ನಾಗರಾಜ್ ಅವರು ಒಡವೆಗಳ ಪೆಟ್ಟಿಗೆಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭವಾಯಿತು. ಸಾಲಗಾಮೆ ರಸ್ತೆಯ ಖಜಾನೆಯಿಂದ ಹೊರಟ ಒಡವೆಗಳ ರಥವು ಆರ್.ಸಿ. ರಸ್ತೆ, ಎನ್.ಆರ್.ವೃತ್ತ ಮತ್ತು ಗಾಂಧಿ ಬಜಾರ್ ಮೂಲಕ ದೇವಾಲಯವನ್ನು ತಲುಪಿತು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.

ಹಂಚಿಕೊಳ್ಳಿ: