ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಕರ್ನಾಟಕ

ಗಣಪತಿ ಶೋಭಾಯಾತ್ರೆಯಲ್ಲಿ ಕುಸಿದು ಬಿದ್ದ ಕಮಾನು – ವೃದ್ಧನ ಸ್ಥಿತಿ ಗಂಭೀರ!

ದಾವಣಗೆರೆ: ಹಿಂದೂ ಮಹಾಗಣಪತಿ ಶೋಭಾಯಾತ್ರೆ (Ganpati Procession) ವೇಳೆ ಡಿಜೆಗೆ ಅಳವಡಿಸಿದ್ದ LED ಕಮಾನು ಮರಿದುಬಿದ್ದು ವೃದ್ಧ ಗಾಯಗೊಂಡ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಸಿದ್ದಲಿಂಗಪ್ಪ LED ಕಮಾನು...

· ದಾವಣಗೆರೆ
ಗಣಪತಿ ಶೋಭಾಯಾತ್ರೆಯಲ್ಲಿ ಮುರಿದು ಬಿದ್ದ ಕಮಾನು – ವೃದ್ಧನಿಗೆ ಗಂಭೀರ ಗಾಯ
ಹಂಚಿಕೊಳ್ಳಿ:

ದಾವಣಗೆರೆ: ಹಿಂದೂ ಮಹಾಗಣಪತಿ ಶೋಭಾಯಾತ್ರೆ (Ganpati Procession) ವೇಳೆ ಡಿಜೆಗೆ ಅಳವಡಿಸಿದ್ದ LED ಕಮಾನು ಮರಿದುಬಿದ್ದು ವೃದ್ಧ ಗಾಯಗೊಂಡ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

ಸಿದ್ದಲಿಂಗಪ್ಪ LED ಕಮಾನು ಬಿದ್ದು ಗಾಯಗೊಂಡ ವೃದ್ಧ. ನಗರದ ಪಿಬಿ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಕಮಾನಿನ ಮೇಲೆ ಹತ್ತಾರು ಯುವಕರು ಕೂತಿದ್ದರಿಂದ ಅದು ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ.

ಗಾಯಾಳು ವೃದ್ಧನನ್ನು ಪೊಲೀಸರು ಹಾಗೂ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಕಮಾನು ಮುರಿದು ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಆರ್ಕೆಸ್ಟ್ರಾ ನೋಡ್ತಿದ್ದ ವೇಳೆ ದುರಂತ – ಲೈಟ್ ಕಂಬ ಬಿದ್ದು ಓರ್ವ ಸಾವು, ಮತ್ತೋರ್ವ ಗಂಭೀರ

ಹಂಚಿಕೊಳ್ಳಿ: