ಗದಗ: ನಾಪತ್ತೆಯಾಗಿದ್ದ KRIDL ಎಂಜಿನಿಯರ್ ಪರ್ವೇಜ್ ಮುಂಬೈನಲ್ಲಿ ಪತ್ತೆ
ಗದಗ: ಸೆಪ್ಟೆಂಬರ್ 13ರಿಂದ ನಾಪತ್ತೆಯಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (KRIDL) ಸಹಾಯಕ ಎಂಜಿನಿಯರ್ ಪರ್ವೇಜ್ ಅವರನ್ನು ಗದಗ ಪೊಲೀಸರು ಪತ್ತೆಹಚ್ಚಿ ವಾಪಸ್ ಕರೆತಂದಿದ್ದಾರೆ. ನಿನ್ನೆ ಶನಿವಾರ ಬೆ...

ಸೆಪ್ಟೆಂಬರ್ 13ರಿಂದ ಕಾಣೆಯಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಎಂಜಿನಿಯರ್ ಪರ್ವೇಜ್ ಅವರು ಮುಂಬೈನ ಬಾಂದ್ರಾದಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ಪತ್ತೆಹಚ್ಚಿ ಶುಕ್ರವಾರ ತಡರಾತ್ರಿ ಗದಗಕ್ಕೆ ಕರೆತಂದಿದ್ದಾರೆ. ಆರೋಗ್ಯವಾಗಿದ್ದ ಪರ್ವೇಜ್ ಅವರನ್ನು ವಿಚಾರಣೆಯ ನಂತರ ಮನೆಗೆ ಕಳುಹಿಸಿಕೊಡಲಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಅವರನ್ನು ಕೆಲಕಾಲ ಇರಿಸಲಾಗಿತ್ತು ಎಂದು ತಿಳಿದುಬಂದಿದ್ದು, ಶನಿವಾರ ಬೆಳಗ್ಗೆ ಅವರು ಹಾವೇರಿಗೆ ತೆರಳಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




