ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ಸಿಎಂ ರೇವಂತ್ ರೆಡ್ಡಿ
ಹೈದರಾಬಾದ್: ‘ರಾವಣನನ್ನು ಸೋಲಿಸಲು ಶ್ರೀರಾಮ ವಾನರ ಸೇನೆಯೊಂದಿಗೆ ಲಂಕೆಗೆ ತೆರಳಿದಂತೆ, ಮೋದಿಯಂತಹ ರಾವಣನನ್ನು ಸೋಲಿಸಲು ನಮ್ಮ ವಾನರ ಸೇನೆ ತೆಲಂಗಾಣದಿಂದ ದೆಹಲಿಗೆ ಬಂದಿದೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆ...

ನವದೆಹಲಿಯ ತೆಲಂಗಾಣ ಭವನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಪ್ರಧಾನಿ ಮೋದಿಯವರನ್ನು ರಾವಣನಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರವು ಎಸ್ಐಆರ್ ಪ್ರಕ್ರಿಯೆಯ ಮೂಲಕ ಸುಮಾರು 13.50 ಕೋಟಿ ಬಡವರ ಮತಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ ಎಂದು ಅವರು ಆರೋಪಿಸಿದ್ದಾರೆ. ಜ್ಞಾನೇಶ್ ಕುಮಾರ್ ಅವರ ನೇಮಕದ ಮೂಲಕ ನಿರ್ದಿಷ್ಟ ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ. ಅಲ್ಲದೆ, ರಾಮಲೀಲಾ ಮೈದಾನದ ರ್ಯಾಲಿಗೆ ತೆರಳಲು ರೈಲ್ವೆ ಇಲಾಖೆ ಸಹಕರಿಸಿಲ್ಲವೆಂದು ರೇವಂತ್ ರೆಡ್ಡಿ ದೂರಿದ್ದಾರೆ.




