ಚಿಕ್ಕಮಗಳೂರು | ಟೈರ್ ಸಿಡಿದು ಕೆರೆಗೆ ಉರುಳಿದ ಕಾರು!
ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ (Car) ಟೈರ್ ಸ್ಫೋಟಗೊಂಡು, ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಘಟನೆ ಚಿಕ್ಕಮಗಳೂರು (Chikkamagaluru) ನಗರದ ಕೋಟೆಕೆರೆಯಲ್ಲಿ ನಡೆದಿದೆ. ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ವಿದ್ಯತ...

ಚಿಕ್ಕಮಗಳೂರು (Chikkamagaluru) ನಗರದ ಕೋಟೆಕೆರೆಯಲ್ಲಿ ಚಲಿಸುತ್ತಿದ್ದ ಕಾರಿನ (Car) ಟೈರ್ ಸ್ಫೋಟಗೊಂಡ ಪರಿಣಾಮ, ವಾಹನದ ಮೇಲಿನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿರುವ ಘಟನೆ ಸಂಭವಿಸಿದೆ.
ಟೈರ್ ಸಿಡಿದ ತಕ್ಷಣವೇ ಕಾರು ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಆ ಬಳಿಕ ಕೆರೆಯ ಸುತ್ತಲೂ ಅಳವಡಿಸಿದ್ದ ಕಬ್ಬಿಣದ ಬೇಲಿಯನ್ನು ಮುರಿದುಕೊಂಡು ಕಾರು ಕೆರೆಯೊಳಗೆ ನುಗ್ಗಿದೆ. ಈ ಡಿಕ್ಕಿಯ ತೀವ್ರತೆಗೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇದನ್ನೂ ಓದಿ: ಹನೂರಿನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ – 9 ಮಂದಿಗೆ ಗಂಭೀರ ಗಾಯ
ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಕ್ರೇನ್ ಸಹಾಯದಿಂದ ಕಾರನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಸಿ.ಟಿ.ರವಿ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ. ಇದನ್ನೂ ಓದಿ: CNG ತುಂಬಿಸುವಾಗ ಕಾರಿನ ಸಿಲಿಂಡರ್ ಸ್ಫೋಟ – ಕಾರು ಛಿದ್ರ ಛಿದ್ರ




