ಚಿಕ್ಕಮಗಳೂರು: ಇಂದಾವರದಲ್ಲಿ ರಿಜ್ವಾನ್ ಸಮಾಧಿ ಮೇಲೆ ವಿವಾದಾತ್ಮಕ ಬರಹ, ಸ್ಥಳೀಯರಲ್ಲಿ ಆಕ್ರೋಶ
ಚಿಕ್ಕಮಗಳೂರು: ಇಲ್ಲಿನ ಇಂದಾವರದಲ್ಲಿರುವ ಪಾಕಿಸ್ತಾನ ಮೂಲದ ಧರ್ಮಗುರು ರಿಯಾಜ್ ಅಹ್ಮದ್ ಗೋಹರ್ ಶಾಹಿ ಅನುಯಾಯಿಯ ಸಮಾಧಿಗೆ ಹಸಿರು ಚಾದರ ಹೊದಿಸಿ, ಕಲ್ಮ (Kalma) ವಿರೋಧಿ ಬರಹ ಬರೆಯಲಾಗಿದೆ. ಇದರಿಂದ ಚಿಕ್ಕಮಗಳೂರಲ್ಲಿ (...

ಚಿಕ್ಕಮಗಳೂರಿನ ಇಂದಾವರದಲ್ಲಿರುವ ರಿಜ್ವಾನ್ ಎಂಬುವವರ ಸಮಾಧಿಯ ಮೇಲೆ ಕಲ್ಮ ವಿರೋಧಿ ಸಾಲುಗಳನ್ನು ಬರೆಯಲಾಗಿದ್ದು, ಈ ಘಟನೆಯು ಮುಸ್ಲಿಂ ಸಮುದಾಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕಳೆದ ವರ್ಷ ಮೃತಪಟ್ಟಿದ್ದ ರಿಜ್ವಾನ್ ಅವರ ಗೋರಿಯ ಮೇಲೆ ಕುಟುಂಬದವರು ಹಸಿರು ಚಾದರವನ್ನು ಹೊದಿಸಿ ಈ ಬರಹಗಳನ್ನು ಕೆತ್ತಿದ್ದಾರೆ. ಧರ್ಮಗುರು ರಿಯಾಜ್ ಅಹ್ಮದ್ ಗೋಹರ್ ಶಾಹಿ ಅವರ ಅನುಯಾಯಿಗಳ ವಿರುದ್ಧ ಮೊದಲಿನಿಂದಲೂ ವಿರೋಧವಿದ್ದು, ಈ ಬೆಳವಣಿಗೆಯು ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗಿದೆ. ಕೂಡಲೇ ಈ ಬರಹ ಮತ್ತು ಚಾದರವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಮುಖಂಡರು ಚಿಕ್ಕಮಗಳೂರು ಎಸ್ಪಿ ಜೀತೆಂದ್ರ ಕುಮಾರ್ ದಾಯ್ಮ ಅವರಿಗೆ ದೂರು ಸಲ್ಲಿಸಿದ್ದಾರೆ.




