ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಚಿಕ್ಕಮಗಳೂರು: ದೀಪಾವಳಿ ಬಾಡೂಟಕ್ಕೆ ವನ್ಯಜೀವಿ ಬೇಟೆ, ಬಿನ್ನಡಿಯಲ್ಲಿ ಓರ್ವನ ಬಂಧನ

ಚಿಕ್ಕಮಗಳೂರು: ದೀಪಾವಳಿ ಬಾಡೂಟಕ್ಕೆ ವನ್ಯಜೀವಿಗಳನ್ನು ಬೇಟೆಯಾಡಿದ್ದ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಅರಣ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ. ಈ ವೇಳೆ ಮೂವರು ಆರೋಪಿಗಳು ಪರಾ...

· ಚಿಕ್ಕಮಗಳೂರು
ದೀಪಾವಳಿ ಬಾಡೂಟಕ್ಕೆ ವನ್ಯಜೀವಿಗಳ ಬೇಟೆ – ಓರ್ವ ಆರೋಪಿ ಅರೆಸ್ಟ್‌, ಮೂವರು ಪರಾರಿ
ಹಂಚಿಕೊಳ್ಳಿ:

ಚಿಕ್ಕಮಗಳೂರಿನ ಬಿನ್ನಡಿ ಅರಣ್ಯ ಪ್ರದೇಶದಲ್ಲಿ ದೀಪಾವಳಿ ಹಬ್ಬದ ಬಾಡೂಟಕ್ಕಾಗಿ ಕಡವೆ ಮತ್ತು ಕಾಡುಕುರಿಯನ್ನು ಬೇಟೆಯಾಡುತ್ತಿದ್ದ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂಬಂಧ ರಮೇಶ್ ಎಂಬಾತನನ್ನು ಬಂಧಿಸಲಾಗಿದ್ದು, ಸ್ಥಳದಿಂದ ಮಹೇಂದ್ರ, ಪ್ರಕಾಶ್ ಹಾಗೂ ಮಲ್ಲಯ್ಯ ಎಂಬುವವರು ಪರಾರಿಯಾಗಿದ್ದಾರೆ. ಆರೋಪಿಗಳ ಮನೆಯಲ್ಲಿ ಮಾಂಸ ಹಂಚಿಕೆ ಮಾಡುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿ, ಎರಡು ನಾಡ ಬಂದೂಕುಗಳು ಹಾಗೂ ವನ್ಯಜೀವಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಹಂಚಿಕೊಳ್ಳಿ: