ಚಿಕ್ಕಬಳ್ಳಾಪುರದ ನಂದಿಬೆಟ್ಟದ ಕಾಡಿನಲ್ಲಿ ಬಾಲಕನ ಶವ ಪತ್ತೆ: ಆರೋಪಿಯೊಂದಿಗೆ ಸ್ಥಳ ಮಹಜರು
– ನಂದಿಬೆಟ್ಟಕ್ಕೆ ಹಂತಕನನ್ನ ಕರೆದೊಯ್ದು ಸ್ಥಳ ಮಹಜರು – ತಮಿಳುನಾಡಿನ ಸೇಲಂಗೆ ವಿಶೇಷ ತಂಡ ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ (Bengaluru) ಏಳು ಜನರ ನರಮೇಧ ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ನಂದಿಬೆಟ್ಟದ ರಂಗಪ್ಪ ಸರ...

ಬೆಂಗಳೂರಿನ ಏಳು ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದ ನಂದಿಬೆಟ್ಟದ ರಂಗಪ್ಪ ಸರ್ಕಲ್ ಬಳಿಯ ಅರಣ್ಯ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಡಲಾಗಿದ್ದ ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಯನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ ಆರು ಮೃತದೇಹಗಳಿಗಾಗಿ ಸ್ಕಂದಗಿರಿ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ತೀವ್ರಗೊಂಡಿದ್ದು, ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ತಮಿಳುನಾಡಿನ ಸೇಲಂಗೆ ಕಳುಹಿಸಲಾಗಿದೆ.




