ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ಕರ್ನಾಟಕ

ಚಿಕ್ಕಬಳ್ಳಾಪುರದ ಬ್ರಹ್ಮಗಿರಿ ಬೆಟ್ಟದಲ್ಲಿ ಸ್ಫೋಟದೊಂದಿಗೆ ಉರುಳಿಬಿದ್ದ ಬೃಹತ್ ಬಂಡೆಗಳು

– ಮೊಬೈಲ್ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಪಕ್ಕದಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿ (Brahmagiri Hill) ಭಾರೀ ಸ್ಫೋಟದಂತಹ (Explosion) ಸದ್ದಿನೊಂದಿಗೆ ಬೃಹತ್...

· ಚಿಕ್ಕಬಳ್ಳಾಪುರ
ನಂದಿಬೆಟ್ಟ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಸ್ಫೋಟ – ಉರುಳಿಬಿದ್ದ ಬೃಹತ್ ಬಂಡೆಗಳು!
ಹಂಚಿಕೊಳ್ಳಿ:

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಬಳಿಯಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಶಬ್ದದೊಂದಿಗೆ ದೊಡ್ಡ ಕಲ್ಲುಬಂಡೆಗಳು ಕಣಿವೆಯತ್ತ ಜಾರಿಬಿದ್ದಿವೆ. ಈ ಘಟನೆಯ ದೃಶ್ಯಗಳನ್ನು ಕಣಿವೆಪುರ ಗ್ರಾಮದ ಸ್ಥಳೀಯರು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋದಲ್ಲಿ ದೂಳು ಏಳುತ್ತಿರುವುದು ಕಂಡುಬಂದಿದೆ. ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಈ ಬೆಟ್ಟದಲ್ಲಿ ಬಂಡೆಗಳು ಉರುಳಿದಾಗ ಆ ಭಾಗದಲ್ಲಿ ಕುರಿಗಾಹಿಗಳು ಯಾರೂ ಇಲ್ಲದ ಕಾರಣ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ. ಬಂಡೆಗಳು ಕುಸಿಯಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಈ ಘಟನೆಯಿಂದಾಗಿ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಹಂಚಿಕೊಳ್ಳಿ: