ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಚೆನ್ನೈ: ಚುನಾವಣಾ ಆಯೋಗದ ಸಭೆಯಿಂದ ಟಿವಿಕೆ ಮತ್ತು ಡಿಎಂಕೆ ಸೇರಿದಂತೆ 9 ಪಕ್ಷಗಳ ಬಹಿಷ್ಕಾರ

ಚೆನ್ನೈ: ಮತದಾರರ ಪಟ್ಟಿಗಳ ವಿಶೇಷ ವಾರ್ಷಿಕ ಪರಿಷ್ಕರಣೆ (ಎಸ್‌ಎಸ್‌ಆರ್‌) ಕುರಿತು ಚರ್ಚಿಸಲು ಶುಕ್ರವಾರ ತಮಿಳುನಾಡು ಚುನಾವಣಾ ಆಯೋಗ ಕರೆದಿದ್ದ ಸಮಾಲೋಚನಾ ಸಭೆಯಿಂದ ಆಡಳಿತಾರೂಢ ಟಿವಿಕೆ, ಪ್ರತಿಪಕ್ಷ ಡಿಎಂಕೆ ಸೇರಿದಂತೆ...

ಮೊದಲು SIR ಲೋಪ ಸರಿಪಡಿಸಿ: ಎಸ್‌ಎಸ್‌ಆರ್‌ ಸಭೆಯಿಂದ ಹೊರನಡೆದ ಟಿವಿಕೆ, ಡಿಎಂಕೆ
ಹಂಚಿಕೊಳ್ಳಿ:

ತಮಿಳುನಾಡಿನ ಮುಖ್ಯ ಚುನಾವಣಾಧಿಕಾರಿ ಅರ್ಚನಾ ಪಟ್ನಾಯಕ್ ಕರೆದಿದ್ದ ವಿಶೇಷ ವಾರ್ಷಿಕ ಪರಿಷ್ಕರಣೆ ಸಭೆಯನ್ನು 12 ರಾಜಕೀಯ ಪಕ್ಷಗಳ ಪೈಕಿ 9 ಪಕ್ಷಗಳು ವಿರೋಧಿಸಿ ಹೊರನಡೆದಿವೆ. ಕಳೆದ ವರ್ಷ ನಡೆದ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ನಡೆದ ಲೋಪದೋಷಗಳನ್ನು ಸರಿಪಡಿಸದ ಕಾರಣಕ್ಕೆ ಟಿವಿಕೆ, ಡಿಎಂಕೆ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿರುವ ಡಿಎಂಕೆ ನಾಯಕ ಐ. ಪರಂತಾಮನ್, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ನವೆಂಬರ್ 12ರಿಂದ ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದೆ.

ಹಂಚಿಕೊಳ್ಳಿ: