ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಚನ್ನರಾಯಪಟ್ಟಣದ ಅವ್ವೇರಹಳ್ಳಿಯಲ್ಲಿ ಕೆರೆಗೆ ಹಾರಿ ವ್ಯಕ್ತಿ ಸಾವು

ಹಾಸನ: ಗೌರಿ – ಗಣೇಶ ವಿಸರ್ಜನಾ ಮೆರವಣಿಗೆ ನಡೆಯುತ್ತಿದ್ದ ವೇಳೆ ಕೆರೆಯ ಬಳಿಗೆ ಮೂರ್ತಿಗಳನ್ನು ತರುವ ಮುನ್ನವೇ ಕಂಠಪೂರ್ತಿ ಕುಡಿದು ಕೆರೆಗೆ ಹಾರಿದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದ...

· ಹಾಸನ
ಗಣೇಶ ವಿಸರ್ಜನೆ ವೇಳೆ ಕಂಠಪೂರ್ತಿ ಕುಡಿದು ಕೆರೆಗೆ ಹಾರಿ ವ್ಯಕ್ತಿ ಸಾವು
ಹಂಚಿಕೊಳ್ಳಿ:

ಚನ್ನರಾಯಪಟ್ಟಣದ ಅವ್ವೇರಹಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಮದ್ಯಪಾನ ಮಾಡಿದ್ದ 35 ವರ್ಷದ ಆನಂದ್ ಎಂಬಾತ ವಿಸರ್ಜನೆಗೂ ಮುನ್ನವೇ ಕೆರೆಗೆ ಹಾರಿದ್ದು, ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಸ್ಥಳದಲ್ಲಿದ್ದವರು ಆತನನ್ನು ರಕ್ಷಿಸಿ ನುಗ್ಗೇಹಳ್ಳಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಆನಂದ್ ಮೃತಪಟ್ಟಿದ್ದಾನೆ. ನುಗ್ಗೇಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ: