ಚಾಮರಾಜನಗರದಲ್ಲಿ ನಾಲ್ಕು ದಿನಗಳ ದಸರಾ ಸಂಭ್ರಮಕ್ಕೆ ಅದ್ಧೂರಿ ಚಾಲನೆ
ಚಾಮರಾಜನಗರ: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಡಿಜಿಲ್ಲೆ ಚಾಮರಾಜನಗರದಲ್ಲಿ ದಸರಾ (Chamarajanagara Dasara) ಸಂಭ್ರಮ ಮೊದಲ ದಿನವೇ ಕಳೆಗಟ್ಟಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಚಾಮರಾಜನಗರ ದಸರಾಗೆ ಅದ್ಧೂರಿ ಚಾಲನೆ...

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದಸರಾ ಹಬ್ಬದ ಸಂಭ್ರಮ ಆರಂಭಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಹೆಲಿಟೂರಿಸಂಗೆ ಚಾಲನೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ 19 ತಳಿಗಳ 38 ಶ್ವಾನಗಳು ಪಾಲ್ಗೊಂಡಿದ್ದರೆ, ಶಾಸಕ ಮಂಜುನಾಥ್ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ರೈತ ದಸರಾ ಅಂಗವಾಗಿ ನಡೆದ ಜಾನಪದ ಕಲಾ ತಂಡಗಳ ಪ್ರದರ್ಶನ ಹಾಗೂ ಹಸುಗಳ ಸ್ಪರ್ಧೆ ಗಮನ ಸೆಳೆಯಿತು. ಅಕ್ಟೋಬರ್ 19ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.




