ಚಾ.ನಗರ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ, ಪರಿಶೀಲನೆ
– ಎಕರೆಗೆ 50,000 ರೂ. ಪರಿಹಾರ ನೀಡುವಂತೆ ರೈತರ ಆಗ್ರಹ ಚಾಮರಾಜನಗರ: ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ (Central Drought Study Team) ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಐಎಎಸ್ ಅಧಿಕಾರಿ ಡಾ. ಸುಧಾಮ್ ಬಾಗ್ ನೇತೃತ...


– ಎಕರೆಗೆ 50,000 ರೂ. ಪರಿಹಾರ ನೀಡುವಂತೆ ರೈತರ ಆಗ್ರಹ
ಚಾಮರಾಜನಗರ: ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ (Central Drought Study Team) ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಐಎಎಸ್ ಅಧಿಕಾರಿ ಡಾ. ಸುಧಾಮ್ ಬಾಗ್ ನೇತೃತ್ವದ ತಂಡ ಭೇಟಿ ನೀಡಿದೆ.
ಗುಂಡ್ಲುಪೇಟೆ ಕ್ಷೇತ್ರದಿಂದ ಬರ ಅಧ್ಯಯನ ಆರಂಭಿಸಲಾಯಿತು. ಕೆರೆಹಳ್ಳಿ ಗ್ರಾಮದಲ್ಲಿ ಒಣಗಿದ ಜೋಳದ ಬೆಳೆ ವೀಕ್ಷಣೆ ಮಾಡಲಾಯಿತು. ಈ ವೇಳೆ ಬೆಳೆ ಸಾಲ ಮನ್ನಾ ಮಾಡುವಂತೆ ರೈತರ ಆಗ್ರಹಿಸಿದರು. ಆರು ತಿಂಗಳಿಂದ ಯಾವ ಬೆಳೆನೂ ಆಗಿಲ್ಲ. ದನಕರುಗಳಿಗೆ ಮೇವಿಲ್ಲ ಎಂದು ರೈತರ ಅಳಲು ತೋಡಿಕೊಂಡರು.
ಜೂನ್‌ನಲ್ಲಿ ಜೋಳ ಬಿತ್ತನೆ ಮಾಡಿದ್ವಿ. ಆದರೆ ಮಳೇನೆ ಆಗ್ಲಿಲ್ಲ, ಎಲ್ಲಾ ಒಣಗೋಯ್ತು. ದನಕರುಗಳಿಗೆ ಮೇವು ಸಾಲುತ್ತಿಲ್ಲ. ಚಿನ್ನ ಅಡವಿಟ್ಟು ಸಾಲಸೋಲ ಮಾಡಿದ್ದೀವೆ. ಈಗ ಮೈಸೂರಿಗೆ ಗಾರೆ ಕೆಲಸಕ್ಕೆ ಹೋಗ್ತಿದ್ದೇವೆ. ಎಕರೆಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ 2,500 ರೂ.ಗೆ ಏನೂ ಬರಲ್ಲ. ಒಂದು ದಿನದ ಉಳುಮೆ ಕೂಲಿಗೂ ಸಾಲೋದಿಲ್ಲ ಎಂದು ಕೇಂದ್ರ ತಂಡದ ಮುಂದೆ ರೈತರ ಅವಲತ್ತುಕೊಂಡರು. ಇದನ್ನೂ ಓದಿ: ಕೆಆರ್‌ಎಸ್ ಬಳಿ ನಡೆಯುವ ಕಾವೇರಿ ಆರತಿ ಮುಂದೂಡಿಕೆ




