ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಬೆಂಗಳೂರು: ನಾಗರಬಾವಿಯಲ್ಲಿ ಬಾಡಿಗೆ ವಿಚಾರಕ್ಕೆ ವಕೀಲ ಶ್ರೀರಾಮ್ ಹತ್ಯೆ, ಚಾಲಕ ಬಂಧನ

ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಬಾವಿ ರಿಂಗ್ ರೋಡ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಹಾಗೂ ವಕೀಲರೊಬ್ಬರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ನಡೆದಿದೆ.ವೃತ್ತಿಯಲ್ಲಿ ವಕೀಲರಾಗಿದ್ದ...

· ಬೆಂಗಳೂರು ನಗರ
ಬೆಂಗಳೂರು: ಹೃದಯಾಘಾತದಿಂದ ವಕೀಲ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಬಾಡಿಗೆ ವಿಚಾರಕ್ಕೆ ಆಟೋ ಚಾಲಕನಿಂದ ಭೀಕರ ಹತ್ಯೆ!
ಹಂಚಿಕೊಳ್ಳಿ:

ಬೆಂಗಳೂರಿನ ನಾಗರಬಾವಿ ರಿಂಗ್ ರೋಡ್ ಬಳಿ ಆಟೋ ಬಾಡಿಗೆಗೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ವಕೀಲ ಶ್ರೀರಾಮ್ ಅವರು ಹತ್ಯೆಯಾಗಿದ್ದಾರೆ. ಆರಂಭದಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಭಾವಿಸಲಾಗಿತ್ತು, ಆದರೆ ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಬಿದ್ದ ಪೆಟ್ಟಿನಿಂದ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ. ಅಕ್ಟೋಬರ್ 9ರಂದು ಆರೋಪಿ ಮೇಘರಾಜ ಮತ್ತು ಆತನ ಸಹಚರರು ಶ್ರೀರಾಮ್ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದೋಚಿದ್ದರು. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಖ್ಯ ಆರೋಪಿ ಮೇಘರಾಜನನ್ನು ವಶಕ್ಕೆ ಪಡೆದಿದ್ದಾರೆ.

ಹಂಚಿಕೊಳ್ಳಿ: