ಬೆಂಗಳೂರು: ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣಕ್ಕೆ ಅವಕಾಶ ನಿರಾಕರಣೆ
ಬೆಂಗಳೂರು: ನಗರದ ಮೆಟ್ರೋ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ಕರ್ನಾಟಕಕ್ಕೆ ಸಿಗಬೇಕಾದ 'ನ್ಯಾಯಯುತ ಪಾಲು' ನೀಡುವಂತೆ ಸಾರ್ವಜನಿಕವಾಗಿ ಆಗ್ರಹಿಸಿದ ಮರುದಿನವೇ, ಬೆಂಗಳೂರು ಮೆಟ್ರೋದ 'ಪಿಂಕ್ ಲೈನ್' ಉದ್ಘಾ...

ಬೆಂಗಳೂರು ಮೆಟ್ರೋದ ಪಿಂಕ್ ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಲು ತಮಗೆ ಅವಕಾಶ ನೀಡಲಾಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾದ ಅನುದಾನದ ಬಗ್ಗೆ ತಾವು ಪ್ರಶ್ನಿಸಿದ್ದಕ್ಕೆ ಈ ರೀತಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಅವರು ದೂರಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 7.5 ಕಿಮೀ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಮೆಟ್ರೋ ಯೋಜನೆಗಳ ಒಟ್ಟು ವೆಚ್ಚದ ಶೇ 84ರಷ್ಟು ಹಣವನ್ನು ಕರ್ನಾಟಕವೇ ಭರಿಸುತ್ತಿದೆ ಎಂದು ಸಚಿವರು ಈ ಹಿಂದೆ ಹೇಳಿದ್ದರು.




