ಬೆಂಗಳೂರು: ಹಿರಿಯ ವಿಮರ್ಶಕ ಕೆ.ವಿ. ನಾರಾಯಣ (79) ನಿಧನ
ಬೆಂಗಳೂರು: ವಿಮರ್ಶಕ ಕೆ.ವಿ. ನಾರಾಯಣ (79) ಅವರು ನಿಧನರಾಗಿದ್ದಾರೆ.ಅವರು ಯಲಹಂಕದಲ್ಲಿ ವಾಸವಿದ್ದರು. ಗುರುವಾರ ತಡರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರಿಗೆ ಪತ್ನಿ ಎಚ್.ಎಸ್. ಶ...

ಯಲಹಂಕದ ನಿವಾಸಿಯಾಗಿದ್ದ ಖ್ಯಾತ ವಿಮರ್ಶಕ ಕೆ.ವಿ. ನಾರಾಯಣ ಅವರು ಗುರುವಾರ ತಡರಾತ್ರಿ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಕಂಪಲಾಪುರದಲ್ಲಿ ಜನಿಸಿದ್ದ ಇವರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ನ್ಯಾಷನಲ್ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಮೃತರು ಪತ್ನಿ ಎಚ್.ಎಸ್. ಶ್ರೀಮತಿ, ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.




