ಮುಖ್ಯ ವಿಷಯಕ್ಕೆ ಹೋಗಿ
The Karnataka Today
15 Oct
ಸುದ್ದಿ
ಕರ್ನಾಟಕ

ಬಂಡೀಪುರ: ಉರುಳಿಗೆ ಸಿಲುಕಿ ಎರಡು ವರ್ಷದ ಹುಲಿ ಸಾವು

– ಕಾಡಾನೆ ಕಳೇಬರ ಪತ್ತೆ; ಎರಡು ದಂತ ಮಾಯ ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ (Bandipur Tiger Reserve) ಪ್ರದೇಶದಲ್ಲಿ ವನ್ಯಜೀವಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಮದ್ದೂರು ವನ್ಯಜೀವಿ ವಲಯದಲ್...

· ಚಾಮರಾಜನಗರ
ಬಂಡೀಪುರದಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವು
ಹಂಚಿಕೊಳ್ಳಿ:

ಬಂಡೀಪುರ ಹುಲಿ ಸಂರಕ್ಷಿತ (Bandipur Tiger Reserve) ಪ್ರದೇಶದ ಮದ್ದೂರು ವನ್ಯಜೀವಿ ವಲಯದಲ್ಲಿ ಎರಡು ವರ್ಷದ ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿದೆ. ಇದೇ ವಲಯದಲ್ಲಿ ಪತ್ತೆಯಾದ ಆನೆಯ ಕಳೇಬರದ ದಂತಗಳು ನಾಪತ್ತೆಯಾಗಿರುವುದು ಕಳ್ಳಬೇಟೆಯ ಶಂಕೆ ಮೂಡಿಸಿದೆ. ಘಟನೆಗಳ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಕ್ಕೆ ಅರಣ್ಯ ಇಲಾಖೆಯನ್ನು ಪರಿಸರವಾದಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕರಣದ ತನಿಖೆಗೆ ಎಸಿಎಫ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಗಸ್ತು ಲೋಪ ಮತ್ತು ವನ್ಯಜೀವಿಗಳ ಸಾವಿನ ಕಾರಣಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ: