ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರಾವಳಿ

ಮಂಗಳೂರಿನಿಂದ ರಾಸ್ ಅಲ್ ಖೈಮಾಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ವಿಮಾನ ಸೇವೆ ಆರಂಭ

ಮಂಗಳೂರು ವಿಮಾನ ನಿಲ್ದಾಣದಿಂದ ಯುಎಇ ದೇಶದ ರಸ್‌ ಅಲ್‌ ಖೈಮಾಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ವಿಮಾನ ಸೇವೆ ಆರಂಭಿಸಿದೆ. ರಸ್‌ ಅಲ್‌ ಖೈಮಾ ಪ್ರದೇಶವು ದುಬೈ ಮತ್ತು ಶಾರ್ಜಾಗೆ ಸಮೀಪದಲ್ಲಿದೆ ಈ ಸೇವೆ ಉಪಯೋಗವಾಗಲಿದೆ...

· ದಕ್ಷಿಣ ಕನ್ನಡ
ಮಂಗಳೂರು- ಯುಎಇಯ ರಾಸ್ ಅಲ್ ಖೈಮಾ ಹೊಸ ಏರ್ ಇಂಡಿಯಾ ನೇರ ವಿಮಾನ ಸೇವೆ ಆರಂಭ, ಸಮಯ ಹೀಗಿದೆ....
ಹಂಚಿಕೊಳ್ಳಿ:

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇಯ ರಾಸ್ ಅಲ್ ಖೈಮಾ ನಗರಕ್ಕೆ ಸೋಮವಾರದಿಂದ ಹೊಸ ನೇರ ವಿಮಾನ ಹಾರಾಟ ಆರಂಭವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಪ್ರತಿ ಸೋಮವಾರ ಮತ್ತು ಶನಿವಾರ ಈ ಮಾರ್ಗದಲ್ಲಿ ಸೇವೆ ನೀಡಲಿದ್ದು, ಮೊದಲ ದಿನ 146 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. 2026ರ ಚಳಿಗಾಲದ ವೇಳಾಪಟ್ಟಿಯ ಪ್ರಕಾರ ಮಂಗಳೂರಿನಿಂದ ವಾರಕ್ಕೆ ಒಟ್ಟು 58 ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಈ ಹೊಸ ಸಂಪರ್ಕವು ದುಬೈ ಮತ್ತು ಶಾರ್ಜಾ ಸಮೀಪದಲ್ಲಿರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಹಂಚಿಕೊಳ್ಳಿ: