ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರಾವಳಿ

ಮಲ್ಪೆಯ ಯುಸಿಎಸ್‌ಎಲ್‌ನಲ್ಲಿ ನಾರ್ವೆಗಾಗಿ ನಿರ್ಮಿಸಿದ 99 ಮೀಟರ್ ಉದ್ದದ ಹಡಗು ಲೋಕಾರ್ಪಣೆ

ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್‌ನಲ್ಲಿ ನಾರ್ವೆ ದೇಶಕ್ಕಾಗಿ ನಿರ್ಮಿಸಲಾದ ಬೃಹತ್ ಸರಕುಸಾಗಣೆ ಹಡಗನ್ನು ಲೋಕಾರ್ಪಣೆಗೊಳಿಸಲಾಗಿದೆ. 'ವಿಲ್ಸನ್ ಎನರ್ಜಿ 1' ಹೆಸರಿನ ಈ ಹಡಗು ಯುಸಿಎಸ್‌ಎಲ್‌ನಲ್ಲಿ ನಿರ್ಮ...

· ದಕ್ಷಿಣ ಕನ್ನಡ
ನಾರ್ವೆ ದೇಶಕ್ಕಾಗಿ ಉಡುಪಿಯ UCSL ನಿರ್ಮಿತ 99 ಮೀ ಉದ್ದದ ಬೃಹತ್ ಹಡಗು ಲೋಕಾರ್ಪಣೆ, 8 ಹಡಗು ನಿರ್ಮಾಣ!
ಹಂಚಿಕೊಳ್ಳಿ:

ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಾರ್ವೆಯ ವಿಲ್ಸನ್ ಎಎಸ್‌ಎ ಕಂಪೆನಿಗಾಗಿ ನಿರ್ಮಿಸಲಾದ ವಿಲ್ಸನ್ ಎನರ್ಜಿ 1 ಸರಕು ಸಾಗಣೆ ಹಡಗನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು. ಸುಮಾರು 160 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಹಡಗು 2200 ಟನ್ ತೂಕವಿದ್ದು 6300 ಟನ್ ಸರಕು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ಹಡಗಿನ ನಿರ್ಮಾಣಕ್ಕೆ ಚಾಲನೆ ಹಾಗೂ ಇನ್ನೊಂದಕ್ಕೆ ತಳಪಾಯ ಸ್ಥಾಪನೆ ನೆರವೇರಿತು. ಒಟ್ಟು ಎಂಟು ಹಡಗುಗಳ ಪೈಕಿ ಮೊದಲನೆಯದನ್ನು ಈಗಾಗಲೇ ಹಸ್ತಾಂತರಿಸಲಾಗಿದ್ದು, ಉಳಿದ ಆರು ಹಡಗುಗಳನ್ನು 2028ರ ಒಳಗಾಗಿ ಪೂರ್ಣಗೊಳಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

ಹಂಚಿಕೊಳ್ಳಿ: