ದಸರಾ ವಿಶೇಷ ರೈಲು: ಮಂಗಳೂರಿಗೆ ನೇರ ಸಂಪರ್ಕವಿಲ್ಲದೆ ಪ್ರಯಾಣಿಕರ ಆಕ್ರೋಶ
ದಸರಾ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಡಗಾವ್ ನಡುವೆ ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಆದರೆ, ಈ ರೈಲು ಮಂಗಳೂರು ಜಂಕ್ಷನ್ ಮತ್ತು ಸೆಂಟ್ರಲ್ ನಿಲ್ದಾಣಗಳನ್ನು ಕೈಬಿಟ್ಟಿರುವುದು ಸ್ಥಳೀಯರ...

ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆಯು ಯಶವಂತಪುರ-ಮಡಗಾವ್ ನಡುವೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಅಕ್ಟೋಬರ್ 16ರಂದು ಯಶವಂತಪುರದಿಂದ ಹೊರಡುವ ರೈಲು, ಅಕ್ಟೋಬರ್ 18ರಂದು ಮಡಗಾವ್ನಿಂದ ಬೆಂಗಳೂರು ದಂಡು ನಿಲ್ದಾಣಕ್ಕೆ ಹಿಂದಿರುಗಲಿದೆ. ಈ ರೈಲು ಕುಣಿಗಲ್, ಹಾಸನ ಮತ್ತು ಉಡುಪಿ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದ್ದು, ಒಟ್ಟು 18 ಕೋಚ್ಗಳನ್ನು ಒಳಗೊಂಡಿದೆ. ಆದರೆ, ಬೆಂಗಳೂರಿನಿಂದ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸದಿರುವ ಬಗ್ಗೆ ಸ್ಥಳೀಯ ರೈಲ್ವೆ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.




