ಮುಖ್ಯ ವಿಷಯಕ್ಕೆ ಹೋಗಿ
The Karnataka Today
15 Oct
ಸುದ್ದಿ
ಕರಾವಳಿ

ಮಂಗಳೂರು ಸೆಂಟ್ರಲ್: ₹ 195.48 ಕೋಟಿ ಆದಾಯ ಸಂಗ್ರಹ, ಇಲ್ಲಿದೆ ಮಾಹಿತಿ

2025-26ರ ಅವಧಿಯಲ್ಲಿ ಮಂಗಳೂರು ಸೆಂಟ್ರಲ್, ಜಂಕ್ಷನ್ ಮತ್ತು ಉಳ್ಳಾಲ ರೈಲು ನಿಲ್ದಾಣಗಳು ಒಟ್ಟು 70 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿವೆ. ಈ ಮೂರು ನಿಲ್ದಾಣಗಳಿಂದ ಸರಿಸುಮಾರು ₹195.48 ಕೋಟಿ ಪ್ರಯಾಣಿಕ ಆದ...

· ದಕ್ಷಿಣ ಕನ್ನಡ
ಅಬ್ಬಬ್ಬಾ! ಮಂಗಳೂರು ಸೆಂಟ್ರಲ್‌ಗೆ ಬಂಪರ್ ಆದಾಯ, ಒಂದೇ ವರ್ಷದಲ್ಲಿ ಗಳಿಸಿದ್ದೆಷ್ಟು ಗೊತ್ತಾ?
ಹಂಚಿಕೊಳ್ಳಿ:

2025-26ನೇ ಸಾಲಿನಲ್ಲಿ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಮತ್ತು ಉಳ್ಳಾಲ ನಿಲ್ದಾಣಗಳಲ್ಲಿ ಒಟ್ಟು 70,10,771 ಪ್ರಯಾಣಿಕರು ಸಂಚರಿಸಿದ್ದು, ಈ ಮೂರು ನಿಲ್ದಾಣಗಳಿಂದ ಸುಮಾರು ₹ 195.48 ಕೋಟಿ ಆದಾಯ ಸಂಗ್ರಹವಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾದ ಅಂಕಿಅಂಶಗಳ ಪ್ರಕಾರ, ಮಂಗಳೂರು ಸೆಂಟ್ರಲ್ ನಿಲ್ದಾಣವೊಂದೇ ಒಟ್ಟು ಪ್ರಯಾಣಿಕರ ಪೈಕಿ ಶೇ. 81ಕ್ಕೂ ಹೆಚ್ಚು ಪಾಲನ್ನು ಹೊಂದಿದೆ. ಅಲ್ಲದೆ, ಮಂಗಳೂರು ಸೆಂಟ್ರಲ್ ಮತ್ತು ಉಳ್ಳಾಲ ನಿಲ್ದಾಣಗಳಲ್ಲಿ ಸರಕು ಸಾಗಣೆ ಪ್ರಮಾಣ ಮತ್ತು ಅದರಿಂದ ಬರುವ ಆದಾಯದಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಈ ನಿಲ್ದಾಣಗಳನ್ನು NSG-2, NSG-3 ಮತ್ತು NSG-4 ಎಂದು ವರ್ಗೀಕರಿಸಲಾಗಿದೆ.

ಹಂಚಿಕೊಳ್ಳಿ: