ಮುಖ್ಯ ವಿಷಯಕ್ಕೆ ಹೋಗಿ
The Karnataka Today
13 Oct
ಸುದ್ದಿ
ಕರಾವಳಿ

ದಸರಾ ರಜೆ ಹೊತ್ತಲ್ಲಿ ಪದವಿ ಸೆಮಿಸ್ಟರ್ ಪರೀಕ್ಷೆ; ಮಂಗಳೂರಿನ ಕಾಲೇಜು ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು, ಮುಂದೇನಾಯ್ತು?

ದಸರಾ ವೇಳೆ ಸೆಮಿಸ್ಟರ್‌ ಪರೀಕ್ಷೆ ಆಯೋಜಿಸಿರುವುದನ್ನು ಖಂಡಿಸಿ ಇಲ್ಲಿನ ಪದವಿ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮಂಗಳೂರಿನ ಬೆಂದೂರ್‌ವೆಲ್‌ ಬಳಿಯ ಖಾಸಗಿ ಕಾಲೇಜು ಅ.12ರಿಂದ 28ರವರೆಗೆ ಸೆಮ...

· ದಕ್ಷಿಣ ಕನ್ನಡ
ದಸರಾ ರಜೆ ಹೊತ್ತಲ್ಲಿ ಪದವಿ ಸೆಮಿಸ್ಟರ್ ಪರೀಕ್ಷೆ; ಮಂಗಳೂರಿನ ಕಾಲೇಜು ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು, ಮುಂದೇನಾಯ್ತು?
ಹಂಚಿಕೊಳ್ಳಿ:

ಮಂಗಳೂರು (ಅ.13): ದಸರಾ ವೇಳೆ ಸೆಮಿಸ್ಟರ್‌ ಪರೀಕ್ಷೆ ಆಯೋಜಿಸಿರುವುದನ್ನು ಖಂಡಿಸಿ ಇಲ್ಲಿನ ಪದವಿ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮಂಗಳೂರಿನ ಬೆಂದೂರ್‌ವೆಲ್‌ ಬಳಿಯ ಖಾಸಗಿ ಕಾಲೇಜು ಅ.12ರಿಂದ 28ರವರೆಗೆ ಸೆಮಿಸ್ಟರ್‌ ಪರೀಕ್ಷೆ ಆಯೋಜಿಸಿದೆ. ಇದರಿಂದ ಹಬ್ಬದ ಆಚರಣೆ ಮತ್ತು ಸಂಭ್ರಮಕ್ಕೆ ತೊಂದರೆಯಾಗುತ್ತಿದೆ ಎಂದು ಸೋಮವಾರ ಬೆಳಗ್ಗೆಯಿಂದಲೇ ನೂರಾರು ಜನ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನ ಗೇಟ್‌ ಹೊರಗೆ ಕುಳಿತು ಪ್ರತಿಭಟಿಸಿದರು. ಇದಕ್ಕೆ ಎಬಿವಿಪಿ ಸಹ ಬೆಂಬಲ ವ್ಯಕ್ತಪಡಿಸಿತು.

ಪರೀಕ್ಷೆ ಮುಂದೂಡುವಂತೆ ಹಲವು ಬಾರಿ ಮನವಿ

ಪರೀಕ್ಷೆ ಮುಂದೂಡುವಂತೆ ಹಲವು ಬಾರಿ ಮನವಿ ಕೊಟ್ಟರೂ ಮುಂದೂಡಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಆಡಳಿತ ಮಂಡಳಿ ಪರೀಕ್ಷೆಯನ್ನು ಅ.19ರಿಂದ 22ರವರೆಗೆ ಮುಂದೂಡಿರುವುದಾಗಿ ಘೋಷಿಸಿತು. ಆದರೂ ಮಣಿಯದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಮುಂದುವರೆಸಿದರು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿ ನಾಯಕರನ್ನು ವಶಕ್ಕೆ ಪಡೆದು ಬಸ್ಸಿನಲ್ಲಿ ತುಂಬಿ ಕರೆದೊಯ್ದರು.

ಹಂಚಿಕೊಳ್ಳಿ: