ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರಾವಳಿ

ಬೆಳ್ತಂಗಡಿ ಕೋರ್ಟ್‌ನಲ್ಲಿ ಸೌಜನ್ಯ ತಾಯಿಯ ರಕ್ತದ ಮಾದರಿ ಸಂಗ್ರಹಿಸಿದ ಎಸ್ಐಟಿ

ಬೆಳ್ತಗಂಡಿ ತಾಲೂಕಿನ ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರು ತನಿಖೆಗೆ ರಚನೆಗೊಂಡ ಎಸ್‌ಐಟಿ ತಂಡ ಬೆಳ್ತಂಗಡಿ ಕೋರ್ಟ್‌ನಲ್ಲೇ ಸೌಜನ್ಯ ತಾಯಿ ರಕ್ತದ ಮಾದರಿ ಸಂಗ್ರಹಿಸಿದೆ. ಜೊತೆಗೆ ಕೆಲ ದಾಖಲೆ...

· ದಕ್ಷಿಣ ಕನ್ನಡ
ಸೌಜನ್ಯ ಕೇಸ್ ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಬೆಳ್ತಂಗಡಿ ಕೋರ್ಟ್‌ನಲ್ಲಿ ತಾಯಿ ರಕ್ತ ಮಾದರಿ ಸಂಗ್ರಹ
ಹಂಚಿಕೊಳ್ಳಿ:

ಬೆಳ್ತಂಗಡಿ ಸೌಜನ್ಯ ಪ್ರಕರಣದ ಮರುತನಿಖೆ ನಡೆಸುತ್ತಿರುವ ಎಸ್ಐಟಿ ತಂಡ, ನ್ಯಾಯಾಲಯದ ಸಮ್ಮುಖದಲ್ಲಿ ಸಂತ್ರಸ್ತೆಯ ತಾಯಿ ಕುಸುಮಾವತಿಯವರ ರಕ್ತದ ಮಾದರಿಯನ್ನು ಪಡೆದುಕೊಂಡಿದೆ. ಡಿಎನ್ಎ ಪರೀಕ್ಷೆಯ ಉದ್ದೇಶದಿಂದ ವೈದ್ಯರ ತಂಡದ ಸಹಾಯದೊಂದಿಗೆ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳು, 2012ರ ಘಟನೆಗೆ ಸಂಬಂಧಿಸಿದ ದಾಖಲೆಗಳು, ಮೊಬೈಲ್ ಟವರ್ ಮಾಹಿತಿ ಮತ್ತು ಈ ಹಿಂದಿನ ತನಿಖೆಯ ಲೋಪದೋಷಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ರಚಿಸಲಾದ ಈ ವಿಶೇಷ ತಂಡವು ಸಾಕ್ಷ್ಯಗಳ ಮರುಪರಿಶೀಲನೆಯಲ್ಲಿ ತೊಡಗಿದೆ.

ಹಂಚಿಕೊಳ್ಳಿ: