ಬಂಟ್ವಾಳ: ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸ್ವಂತ ವಸ್ತ್ರಮಳಿಗೆ ಆರಂಭಿಸಿದ ಶಕುಂತಳಾ
Gruha Lakshmi scheme success story: ಬಂಟ್ವಾಳದ ಶಕುಂತಳಾ ಅವರು ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣವನ್ನು ಮೂರು ವರ್ಷಗಳ ಕಾಲ ಉಳಿತಾಯ ಮಾಡಿದ್ದಾರೆ. ಈ 72 ಸಾವಿರ ರೂ. ಹಣದೊಂದಿಗೆ ಕುಟುಂಬದ ಉಳಿತಾಯವನ್ನೂ ಸೇರಿಸಿ ಸ್ವ...

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಶಕುಂತಳಾ ಎಂಬುವವರು ಗೃಹಲಕ್ಷ್ಮಿ ಯೋಜನೆಯಡಿ ದೊರೆತ ಹಣವನ್ನು ಉಳಿತಾಯ ಮಾಡಿ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 72 ಸಾವಿರ ರೂಪಾಯಿಗಳನ್ನು ಕೂಡಿಟ್ಟಿದ್ದ ಅವರು, ಕುಟುಂಬದ ಉಳಿತಾಯದೊಂದಿಗೆ ಸೇರಿಸಿ ಒಟ್ಟು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ಟೈಲ್ಸ್ & ಗಾರ್ಮೆಂಟ್ಸ್ ಮಳಿಗೆಯನ್ನು ಸ್ಥಾಪಿಸಿದ್ದಾರೆ. ನವರಾತ್ರಿ ಹಬ್ಬದ ಪ್ರಯುಕ್ತ ಈ ಮಳಿಗೆಯನ್ನು ಉದ್ಘಾಟಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯಾದ ಶಕುಂತಳಾ ಅವರ ಈ ಪ್ರಯತ್ನಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




