ವಾರಾಣಸಿಯ ಪುರಾಣ ದುರ್ಗಾ ಬಾರಿಯಲ್ಲಿ ವಿಸರ್ಜನೆಯಾಗದ 18ನೇ ಶತಮಾನದ ದುರ್ಗಾ ಮೂರ್ತಿ
ಸಾಮಾನ್ಯವಾಗಿ ದುರ್ಗಾ ಪೂಜೆ ಮುಗಿದ ಬಳಿಕ ವಿಜಯದಶಮಿಯ ದಿನದಂದು ದೇವಿಯ ಮೂರ್ತಿಯನ್ನು ನದಿಯಲ್ಲಿ ವಿಸರ್ಜಿಸುವುದು ವಾಡಿಕೆ. ಆದರೆ, ಉತ್ತರ ಪ್ರದೇಶದ ವಾರಾಣಸಿಯ ಮದನ್‌ಪುರದಲ್ಲಿರುವ 'ಪುರಾಣ ದುರ್ಗಾ ಬಾರಿ' ದೇವಾಲಯದಲ್ಲಿರ...

ವಾರಾಣಸಿಯ ಮದನ್‌ಪುರದಲ್ಲಿರುವ ಪುರಾಣ ದುರ್ಗಾ ಬಾರಿಯಲ್ಲಿ 1767ರಿಂದಲೂ ದುರ್ಗಾದೇವಿಯ ಮೂರ್ತಿಯನ್ನು ವಿಸರ್ಜನೆ ಮಾಡದೆ ಪೂಜಿಸಲಾಗುತ್ತಿದೆ. ಮುಖೋಪಾಧ್ಯಾಯ ಕುಟುಂಬವು ಸ್ಥಾಪಿಸಿದ ಈ ವಿಗ್ರಹವು ವಿಸರ್ಜನೆಗೆ ಜಗ್ಗದಿದ್ದಾಗ, ದೇವಿಯ ಇಚ್ಛೆಯಂತೆ ಅಲ್ಲಿಯೇ ಶಾಶ್ವತವಾಗಿ ಪ್ರತಿಷ್ಠಾಪಿಸಲಾಯಿತು. ಇಲ್ಲಿ ದೇವಿಯೊಂದಿಗೆ ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರ ವಿಗ್ರಹಗಳಿವೆ. ಇದರ ಜೊತೆಗೆ 11ನೇ ಶತಮಾನದ ವಿಷ್ಣುವಿನ ಕಪ್ಪು ಕಲ್ಲಿನ ವಿಗ್ರಹ ಮತ್ತು ಭೂಮಿಯಡಿಯಿಂದ ದೊರೆತ 22 ಶಿವಲಿಂಗಗಳು ಇಲ್ಲಿನ ವಿಶೇಷತೆಗಳಾಗಿವೆ. ಕುಟುಂಬದ ಸದಸ್ಯರು ವಿಗ್ರಹವನ್ನು ಮುಟ್ಟದೆ ಕೇವಲ ಅರ್ಚಕರಿಂದ ಮಾತ್ರ ಪೂಜೆ ಮಾಡಿಸುವ ಕಟ್ಟುನಿಟ್ಟಿನ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ.




