ದೆಹಲಿ ಬಿಕಾನೇರ್ ಹೌಸ್‌ನಲ್ಲಿ ರಿಹಾನ್ ವಾದ್ರಾ ಕಲಾಕೃತಿಗಳ ಪ್ರದರ್ಶನಕ್ಕೆ ತಡೆ
ದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಆಗಿರುವ ಪ್ರಿಯಾಂಕಾ ಗಾಂಧಿ ಅವರ ಪುತ್ರ, ದೃಶ್ಯ ಕಲಾವಿದ ಹಾಗೂ ಫೋಟೋಗ್ರಾಫರ್ ರಿಹಾನ್ ವಾದ್ರಾ ಅವರ ಕಲಾ ಪ್ರದರ್ಶನದ ಫೋಟೋಗಳನ್ನು ಹೊಸ ದೆಹಲಿಯ ಪ್ರತಿಷ್ಠಿತ 'ಬಿಕಾ...

ಹೊಸ ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ರಿಹಾನ್ ವಾದ್ರಾ ಅವರ ನೋ ಐಡಿಯಾ ಈಸ್ ಫೈನಲ್ ಕಲಾ ಪ್ರದರ್ಶನದ ಕೆಲವು ಫೋಟೋಗಳನ್ನು ಆಡಳಿತ ಮಂಡಳಿ ಬಲವಂತವಾಗಿ ತೆಗೆದುಹಾಕಿದೆ. ಈ ಕಲಾಕೃತಿಗಳಲ್ಲಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಚಿತ್ರಗಳಿದ್ದ ಕಾರಣಕ್ಕೆ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ. ಈ ಬೆಳವಣಿಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಿಹಾನ್ ವಾದ್ರಾ, ಇದು ಕಲಾವಿದರ ಮೇಲಿನ ಸೆನ್ಸಾರ್‌ಶಿಪ್ ಎಂದು ಕಿಡಿಕಾರಿದ್ದಾರೆ. ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಘಟನೆಯನ್ನು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಎಂದು ಕರೆದಿದ್ದು, ಕಲಾಕೃತಿಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.




