ಸೂರತ್: 20 ನೌಕರರಿಗೆ ತಲಾ 1 ಲಕ್ಷ ರೂಪಾಯಿ ದೀಪಾವಳಿ ಬೋನಸ್ ನೀಡಿದ ಉದ್ಯಮಿ ರಾಮಸ್ವರೂಪ್ ಮುಂಡೆ
ಅಹಮದಾಬಾದ್/ಸೂರತ್: ದೀಪಗಳ ಹಬ್ಬ ದೀಪಾವಳಿ ಸಂತೋಷ ಹಂಚಿಕೊಳ್ಳುವ ಹಬ್ಬ. ಸೂರತ್ ಜವಳಿ ಉದ್ಯಮಿ ರಾಮಸ್ವರೂಪ್ ಮುಂಡೆ 20 ಉದ್ಯೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಬೋನಸ್‌ಗಳನ್ನು ವಿತರಿಸಿದರು. ಪೂಜಾ ಥಾಲಿಯಲ್ಲಿ ವಸ್ತುಗಳನ್ನು...

ಸೂರತ್‌ನ ಮೋಟಾ ವರಾಚಾ ಪ್ರದೇಶದ ಜವಳಿ ಉದ್ಯಮಿ ರಾಮಸ್ವರೂಪ್ ಮುಂಡೆ ತಮ್ಮ ಸಂಸ್ಥೆಯ 20 ಉದ್ಯೋಗಿಗಳಿಗೆ ದೀಪಾವಳಿ ಪ್ರಯುಕ್ತ ತಲಾ 1 ಲಕ್ಷ ರೂಪಾಯಿ ಬೋನಸ್ ನೀಡಿದ್ದಾರೆ. ಪೂಜಾ ಥಾಲಿಯಲ್ಲಿ ಹೊಸ ನೋಟುಗಳ ಬಂಡಲ್‌ಗಳನ್ನು ಇರಿಸಿ ತಮ್ಮ ಪತ್ನಿಯ ಮೂಲಕ ಉದ್ಯೋಗಿಗಳಿಗೆ ತಲುಪಿಸುವಂತೆ ವ್ಯವಸ್ಥೆ ಮಾಡಿದರು. ಈ ವಿಭಿನ್ನ ಹಾಗೂ ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಸಿಬ್ಬಂದಿ ಭಾವುಕರಾಗಿ ಕಣ್ಣೀರು ಹಾಕಿದರು. ಮಹಿಳಾ ಉದ್ಯೋಗಿಗಳಿಗೆ ಯಾವಾಗಲೂ ಬೆಂಬಲವಾಗಿರುವುದಾಗಿ ಈ ಸಂದರ್ಭದಲ್ಲಿ ಉದ್ಯಮಿ ಭರವಸೆ ನೀಡಿದರು.




