ರಾವಣನ ಪ್ರತಿಕೃತಿ ದಹನ: ಮಾನವ ಹಕ್ಕುಗಳ ಆಯೋಗಕ್ಕೆ ಬಂತು ವಿಚಿತ್ರ ದೂರು!
ರಾಯಪುರ: ಸಾಮಾನ್ಯವಾಗಿ ಪೊಲೀಸ್ ವಶದಲ್ಲಿನ ಚಿತ್ರಹಿಂಸೆ, ಪೊಲೀಸರ ದೌರ್ಜನ್ಯ ಮತ್ತು ಸಾಮಾಜಿಕ ಅನ್ಯಾಯದಂತಹ ಗಂಭೀರ ಪ್ರಕರಣಗಳನ್ನು ಮಾನವ ಹಕ್ಕುಗಳ ಆಯೋಗಗಳು ನಿರ್ವಹಿಸುತ್ತವೆ. ಆದರೆ, ಛತ್ತೀಸ್ಗಢ ರಾಜ್ಯ ಮಾನವ ಹಕ್ಕುಗಳ...

ದಸರಾ ಹಬ್ಬದ ವೇಳೆ ರಾವಣನ ಪ್ರತಿಕೃತಿ ಸುಡುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಛತ್ತೀಸ್ಗಢ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (CGSHRC) ನಾಗರಿಕರೊಬ್ಬರು ವಿಚಿತ್ರ ದೂರು ನೀಡಿದ್ದಾರೆ. ರಾವಣನ ಬದಲಿಗೆ ದುರ್ಯೋಧನನನ್ನು ಏಕೆ ದಹಿಸುವುದಿಲ್ಲ ಎಂದು ಪ್ರಶ್ನಿಸಿರುವ ಅರ್ಜಿದಾರರ ವಾದವನ್ನು ಆಯೋಗವು ತಿರಸ್ಕರಿಸಿದೆ. ರಾವಣನು ಮನುಷ್ಯನಲ್ಲದಿರುವುದರಿಂದ ಈ ವಿಷಯ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಯೋಗದ ಅಧ್ಯಕ್ಷ ಗಿರ್ಧಾರಿ ನಾಯಕ್ ಸ್ಪಷ್ಟಪಡಿಸಿದ್ದಾರೆ. ಇಂತಹ ಅಸಂಬದ್ಧ ದೂರುಗಳು ಆಯೋಗದ ಕಾರ್ಯಭಾರವನ್ನು ಹೆಚ್ಚಿಸುತ್ತಿದ್ದು, ಈ ಅರ್ಜಿಯನ್ನು ಕಾನೂನುಬದ್ಧವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.




