ಪುಣೆ: ಲಂಡನ್‌ನಿಂದ ನಾಪತ್ತೆಯಾಗಿದ್ದ ಛತ್ರಪತಿ ಸಂಭಾಜಿನಗರದ ಮುಗ್ಧಾ ದೇಶಮುಖ್ ಶವವಾಗಿ ಪತ್ತೆ
ಪುಣೆ: ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ್ದ 34 ವರ್ಷದ ಮಹಿಳೆಯೊಬ್ಬರು ಕುಟುಂಬದವರಿಗೆ ಯಾವುದೇ ಮಾಹಿತಿ ನೀಡದೆ ಭಾರತಕ್ಕೆ ಮರಳಿದ್ದು, ಮಹಾರಾಷ್ಟ್ರದ ಪುಣೆಯ ಬಾಡಿಗೆ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹ...

ಎಂಬಿಎ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ ಛತ್ರಪತಿ ಸಂಭಾಜಿನಗರದ ಮುಗ್ಧಾ ದೇಶಮುಖ್, ಕುಟುಂಬಕ್ಕೆ ತಿಳಿಸದೆ ಭಾರತಕ್ಕೆ ಮರಳಿದ್ದು ಪುಣೆಯ ಗಹುಂಜೆಯಲ್ಲಿರುವ ಲೋಧಾ ಬೆಲ್ಮೊಂಡೊ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಕ್ಟೋಬರ್ 24ರಿಂದ ಆಕೆಯ ಸಂಪರ್ಕ ಕಡಿತಗೊಂಡಿದ್ದರಿಂದ ಆತಂಕಗೊಂಡಿದ್ದ ಕುಟುಂಬದವರು, ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಫುಡ್ ಡೆಲಿವರಿ ವಹಿವಾಟುಗಳ ಸುಳಿವನ್ನು ಆಧರಿಸಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಶಿರಗಾಂವ್ ಪೊಲೀಸರು ಫ್ಲ್ಯಾಟ್‌ನ ಬಾಗಿಲು ಒಡೆದು ಒಳಗೆ ಹೋದಾಗ ಮೃತದೇಹ ಪತ್ತೆಯಾಗಿದೆ. ಮುಗ್ಧಾ ಅವರು ಏಪ್ರಿಲ್ ತಿಂಗಳಲ್ಲೇ ಈ ಫ್ಲ್ಯಾಟ್ ಬಾಡಿಗೆಗೆ ಪಡೆದಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.




