ಪಿಂಚಣಿ ಯೋಜನೆ: ಇಂದಿರಾ ಗಾಂಧಿ ಹೆಸರಿನ ಬದಲು 'ಪ್ರಧಾನ ಮಂತ್ರಿ' ಎಂದು ಮರುನಾಮಕರಣ!
ಕೇಂದ್ರ ಸರ್ಕಾರವು ಇಂದಿರಾ ಗಾಂಧಿ ಹೆಸರಿನಲ್ಲಿದ್ದ ಪ್ರಮುಖ ಪಿಂಚಣಿ ಯೋಜನೆಗಳಿಗೆ 'ಪ್ರಧಾನ ಮಂತ್ರಿ' ಎಂದು ಮರುನಾಮಕರಣ ಮಾಡಿದೆ. ಸಂಪುಟ ನಿರ್ಧಾರದಿಂದ PM-OAP, PM-WP, PM-DP ಹೊಸ ಹೆಸರು ಪಡೆದಿವೆ. 53,428 ಕೋಟಿ ರೂ....

ಕೇಂದ್ರ ಸರ್ಕಾರವು ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ ಬರುವ ಪಿಂಚಣಿ ಯೋಜನೆಗಳ ಹೆಸರನ್ನು ಬದಲಾಯಿಸಿದ್ದು, ಇಂದಿರಾ ಗಾಂಧಿ ಅವರ ಹೆಸರಿನ ಬದಲಿಗೆ ಪ್ರಧಾನಮಂತ್ರಿ ಎಂದು ಮರುನಾಮಕರಣ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಚಿವ ಸಂಪುಟವು 2026-27 ರಿಂದ 2030-31ರ ಅವಧಿಗೆ 53,428 ಕೋಟಿ ರೂ. ಅನುದಾನವನ್ನು ಈ ಯೋಜನೆಗಳಿಗಾಗಿ ಮಂಜೂರು ಮಾಡಿದೆ. ಇದಲ್ಲದೆ ದಿವ್ಯಾಂಗರ ಪಿಂಚಣಿಗೆ ಸಂಬಂಧಿಸಿದ ಅರ್ಹತಾ ಮಾನದಂಡವನ್ನು ಶೇ. 80ರಿಂದ ಶೇ. 40ಕ್ಕೆ ಇಳಿಸಲಾಗಿದ್ದು, ಜನನದಿಂದಲೇ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬದಲಾವಣೆಗಳಿಂದ ದೇಶದ ಸುಮಾರು 3.2 ಕೋಟಿ ಫಲಾನುಭವಿಗಳಿಗೆ ನೇರ ಆರ್ಥಿಕ ನೆರವು ಮುಂದುವರಿಯಲಿದೆ.




