ಮುಖ್ಯ ವಿಷಯಕ್ಕೆ ಹೋಗಿ
The Karnataka Today
15 Oct
ಸುದ್ದಿ
ಭಾರತ

ಗುಜರಾತ್: ಮಗುವಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ ಬಂಧನ

ವಾವ್-ಥಾರಾದ್: ಪತ್ನಿ ತವರು ಮನೆ ಸೇರಿದ್ದರಿಂದ ಮಗು ನೋಡಿಕೊಳ್ಳಲು ಕಷ್ಟಪಡುತ್ತಿದ್ದ ತಂದೆಯೊಬ್ಬ ಘನ ಘೋರ ಕೃತ್ಯವೆಸಗಿದ್ದಾರೆ. ತನ್ನ ಎರಡೂವರೆ ವರ್ಷದ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗುಜರಾತ್‌ನ ವ...

ತವರು ಮನೆ ಸೇರಿದ ಪತ್ನಿ: ಮಗು ನಿಭಾಯಿಸಲು ಕಷ್ಟಪಡುತ್ತಿದ್ದ ತಂದೆ, ಮಾಡಿದ್ದು ಘನ ಘೋರ ಕೃತ್ಯ!
ಹಂಚಿಕೊಳ್ಳಿ:

ಗುಜರಾತ್‌ನ ವಾವ್-ಥಾರಾದ್ ಪ್ರದೇಶದ ಸುಯಿಗಮ್‌ನಲ್ಲಿ ಪತ್ನಿ ತವರು ಮನೆಗೆ ತೆರಳಿದ ನಂತರ ಎರಡೂವರೆ ವರ್ಷದ ಮಗ ನವ್‌ಘನ್‌ನನ್ನು ನೋಡಿಕೊಳ್ಳಲು ಕಷ್ಟಪಟ್ಟ ಅಶೋಕ್ ರಾವಲ್ ಎಂಬಾತ ಮಗುವಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಗು ಮೃತಪಟ್ಟ ಬಳಿಕ, ಆರೋಪಿಯು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಸ್ಮಶಾನದಲ್ಲಿ ರಹಸ್ಯವಾಗಿ ಹೂತುಹಾಕಿದ್ದಾನೆ. ಈ ವಿಷಯ ತಿಳಿದ ಚಿಕ್ಕಪ್ಪ ಬಾಬುಭಾಯಿ ರಾವಲ್ ನೀಡಿದ ದೂರಿನ ಮೇರೆಗೆ ಸುಯಿಗಾಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ: