ಪಿಂಪ್ರಿ-ಚಿಂಚವಾಡ: 18ನೇ ಮಹಡಿಯಿಂದ ಮಗನೊಂದಿಗೆ ಜಿಗಿದು ಮಹಿಳೆ ಆತ್ಮಹತ್ಯೆ
ಪುಣೆ: 33 ವರ್ಷದ ಮಹಿಳೆಯೊಬ್ಬರು ತಮ್ಮ ಆರು ವರ್ಷದ ಮಗನೊಂದಿಗೆ ವಸತಿ ಕಟ್ಟಡವೊಂದರ 18ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಶುಕ್ರವಾರ ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡದಲ್ಲಿ ನಡೆದಿದೆ.ಮೃತ...

ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡದ ಸಿಗ್ನೇಚರ್ ಪಾರ್ಕ್ ವಸತಿ ಸಂಕೀರ್ಣದಲ್ಲಿ 33 ವರ್ಷದ ಏಕ್ತಾ ಬಂಗಡ್ ತಮ್ಮ ಆರು ವರ್ಷದ ಮಗ ಮಾಧವ್ ಜೊತೆ 18ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ, ಶುಕ್ರವಾರ ಸಂಜೆ ಈ ಕೃತ್ಯ ಎಸಗಿದ್ದಾರೆ. ಸ್ಥಳದಲ್ಲಿ ಪತ್ತೆಯಾದ 7-8 ಪುಟಗಳ ಡೆತ್ ನೋಟ್‌ನಲ್ಲಿ, ತಮ್ಮ ಪತಿ ಮನೋಜ್ ಬಂಗಡ್ ಅವರು ಮರುಮದುವೆಯಾಗಿ ಹೊಸ ಜೀವನ ಆರಂಭಿಸಬೇಕೆಂದು ಏಕ್ತಾ ಕೋರಿದ್ದಾರೆ. ಮಗನ ಭವಿಷ್ಯ ಮತ್ತು ಮರುಮದುವೆಗೆ ಮಗು ಅಡ್ಡಿಯಾಗಬಹುದು ಎಂಬ ಆತಂಕವನ್ನು ಅವರು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ವಾಕಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




