ನವೇಗಾಂವ್-ನಗ್‌ಜಿರಾ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಸಾವು: ಎಂಟು ಮಂದಿ ಬಂಧನ
ನವೇಗಾಂವ್: ಮಂಗಳವಾರದಂದು ಮಹಾರಾಷ್ಟ್ರದ ನವೇಗಾಂವ್-ನಗ್‌ಜಿರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (NNTR) ಹುಲಿಯೊಂದು ಶವವಾಗಿ ಪತ್ತೆಯಾಗಿದೆ. ಇದು ವಿದ್ಯುತ್ ಆಘಾತದಿಂದ ಸಂಭವಿಸಿದ ಸಾವಿರಬಹುದು ಎಂದು ಶಂಕಿಸಲಾಗಿದೆ.ಅರಣ್ಯ...

ಮಹಾರಾಷ್ಟ್ರದ ನವೇಗಾಂವ್-ನಗ್‌ಜಿರಾ ಹುಲಿ ಸಂರಕ್ಷಿತ ಪ್ರದೇಶದ ಬೋಡುಂದಾ ಗ್ರಾಮದ ಬಳಿ ಟಿ-39 ಎಂಬ ನಾಲ್ಕು ವರ್ಷದ ಹುಲಿಯ ಮೃತದೇಹ ಪತ್ತೆಯಾಗಿದೆ. ಜಮೀನಿನ ಬಳಿ ಅಳವಡಿಸಿದ್ದ ವಿದ್ಯುತ್ ತಂತಿಗೆ ತಗುಲಿ ಹುಲಿ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಪ್ರೀತಮ್‌ಸಿಂಗ್ ಕೊಡಾಪೆ ಶಂಕಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ರೈತ ಸೇರಿದಂತೆ ಎಂಟು ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೃತಪಟ್ಟ ಹುಲಿಯ ದೇಹದ ಮೇಲೆ ಸುಟ್ಟ ಗಾಯಗಳಿದ್ದು, ಆರೋಪಿಗಳು ಶವವನ್ನು ಅರಣ್ಯದ ಒಳಭಾಗಕ್ಕೆ ಸಾಗಿಸಿ ಎಸೆದಿರಬಹುದು ಎಂದು ಅಂದಾಜಿಸಲಾಗಿದೆ.




