ನವದೆಹಲಿಯ ತೋಟದಲ್ಲಿ ಮಗುವಿನ ಅಂತ್ಯಕ್ರಿಯೆ ನೆರವೇರಿಸಿದ ಸೋನಿಯಾ ಮತ್ತು ರಾಜೀವ್ ಗಾಂಧಿ
ಸೋನಿಯಾ ಗಾಂಧಿಯವರ ಆತ್ಮಕಥೆ "ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಅವರ ವೈಯಕ್ತಿಕ ನೋವನ್ನು ತೆರೆದಿಟ್ಟಿದೆ. ರಾಜೀವ್ ಗಾಂಧಿಯವರೊಂದಿಗೆ ತಮ್ಮ ಮೊದಲ ಗಂಡು ಮಗುವನ್ನು ಕಳೆದುಕೊಂಡ ದುಃಖದ ಘಟನೆಯನ್ನು ವಿವರಿಸಿದ್ದಾರೆ. 1969...

ತಮ್ಮ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಕೃತಿಯಲ್ಲಿ ಸೋನಿಯಾ ಗಾಂಧಿ ತಮ್ಮ ಮೊದಲ ಪುತ್ರನ ಸಾವಿನ ನೋವಿನ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 1969ರಲ್ಲಿ ಅವಧಿಗೂ ಮುನ್ನ ಜನಿಸಿದ ಮಗು ಕೆಲವೇ ಗಂಟೆಗಳಲ್ಲಿ ಮೃತಪಟ್ಟಾಗ ದಂಪತಿ ತೀವ್ರ ಆಘಾತಕ್ಕೊಳಗಾಗಿದ್ದರು. ಮಗುವಿನ ದೇಹವನ್ನು ನದಿಗೆ ಬಿಡುವ ಸಂಪ್ರದಾಯವನ್ನು ವಿರೋಧಿಸಿದ ಸೋನಿಯಾ, ಮೆಹ್ರೌಲಿಯ ಫಿರೋಜ್ ಗಾಂಧಿ ತೋಟದಲ್ಲಿರುವ ಗುಲಾಬಿ ಗಿಡದ ಬುಡದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ದುರಂತದ ನಂತರ 1970ರಲ್ಲಿ ರಾಹುಲ್ ಗಾಂಧಿ ಜನಿಸಿದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.




