ನವದೆಹಲಿ: ಭಾರತದಲ್ಲಿ ಬಂಧಿತನಾಗಿದ್ದ ಅಮೆರಿಕ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್ ಡೈಕ್ ಆರೋಪ
ನವದೆಹಲಿ: ಮಾರ್ಚ್ ತಿಂಗಳಲ್ಲಿ ಮ್ಯಾನ್ಮಾರ್ ಮೂಲಕ, ಮಾನ್ಯ ಪ್ರಯಾಣ ದಾಖಲೆಗಳಿಲ್ಲದೆ ಭಾರತ ಪ್ರವೇಶಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 6 ಉಕ್ರೇನಿಯನ್ನರೊಂದಿಗೆ ಅಮೆರಿಕದ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ...

ಮಾರ್ಚ್ ತಿಂಗಳಲ್ಲಿ ಮ್ಯಾನ್ಮಾರ್ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ ಆರೋಪದಡಿ ಎನ್‌ಐಎ ಬಂಧಿಸಿದ್ದ ಅಮೆರಿಕದ ಮ್ಯಾಥ್ಯೂ ಆರನ್ ವ್ಯಾನ್ ಡೈಕ್ ಮತ್ತು ಆರು ಉಕ್ರೇನಿಯನ್ನರು ಇದೀಗ ಬಿಡುಗಡೆಗೊಂಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಲೇ ತಮ್ಮನ್ನು ಭಾರತದಲ್ಲಿ ಆರು ತಿಂಗಳು ಬಂಧನದಲ್ಲಿಡಲಾಗಿತ್ತು ಎಂದು ಮ್ಯಾಥ್ಯೂ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಶೀಘ್ರವೇ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ವಿಶೇಷ ಎನ್‌ಐಎ ನ್ಯಾಯಾಲಯವು ಇವರಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ್ದು, ತನಿಖೆಗೆ ಅಗತ್ಯವಿದ್ದಾಗ ಹಾಜರಾಗುವಂತೆ ಷರತ್ತು ವಿಧಿಸಿದೆ. ಆರೋಪಿಗಳು ಸಶಸ್ತ್ರ ಗುಂಪುಗಳಿಗೆ ಡ್ರೋನ್ ತಂತ್ರಜ್ಞಾನದ ತರಬೇತಿ ನೀಡುತ್ತಿದ್ದರು ಎಂದು ಎನ್‌ಐಎ ತನಿಖೆ ನಡೆಸುತ್ತಿದೆ.




