ಅಲ್ಬೇನಿಯಾದ ಘಟನೆ ಭಾರತಕ್ಕೆ ಪಾಠ: ಸಂಜಯ್ ರಾವತ್ ಹೇಳಿಕೆಗೆ ತೀವ್ರ ವಿರೋಧ
ಮುಂಬೈ: ಶಿವಸೇನೆ-ಯುಬಿಟಿ (Shiv Sena-UBT) ನಾಯಕ ಸಂಜಯ್ ರಾವತ್ ಅವರು, ಅಲ್ಬೇನಿಯಾದಲ್ಲಿ ಅಲ್ಲಿನ ಸುಪ್ರೀಂ ಕೋರ್ಟ್ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾರತಕ್ಕೆ ಒಂದು ಪಾಠವೆಂದು ಉಲ್ಲೇಖಿಸುವ ಮೂಲಕ ದೊಡ್ಡ ರಾಜಕೀಯ ವ...

ಅಲ್ಬೇನಿಯಾದಲ್ಲಿ ಭ್ರಷ್ಟ ಪ್ರಧಾನಿ ಎಡಿ ರಾಮ ಅವರನ್ನು ಬೆಂಬಲಿಸುತ್ತಿದೆ ಎಂಬ ಆರೋಪದ ಮೇಲೆ ಸುಪ್ರೀಂ ಕೋರ್ಟ್ ಕಟ್ಟಡಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಘಟನೆಯನ್ನು ಶಿವಸೇನೆ-ಯುಬಿಟಿ ನಾಯಕ ಸಂಜಯ್ ರಾವತ್ ಉಲ್ಲೇಖಿಸಿದ್ದಾರೆ. ಇಂತಹ ಘಟನೆಗಳಿಂದ ಭಾರತ ಪಾಠ ಕಲಿಯಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾವತ್ ಅವರ ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ದೇಶದ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಅರಾಜಕತೆಯತ್ತ ತಳ್ಳುವ ಪ್ರಯತ್ನ ಎಂದು ಟೀಕಿಸಿದೆ. ಶಿವಸೇನೆ ನಾಯಕ ಸಂಜಯ್ ನಿರುಪಮ್ ಕೂಡ ರಾವತ್ ಅವರ ನಡೆಯನ್ನು ಟೀಕಿಸಿದ್ದು, ವಿವಾದವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.




