ಮುಂಬೈಯಲ್ಲಿ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ: ಮತ್ತೊಬ್ಬ ವಿಐಪಿಯೇ ಅಸಲಿ ಗುರಿ
ಮುಂಬಯಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಶೂಟರ್‌ಗಳ ಗುರಿ ಬೇರೊಬ್ಬ ಪ್ರಭಾವಿಯಾಗಿದ್ದರು ಎಂದು ಕ್ರೈಂ ಬ್ರಾಂಚ್ ತನಿಖಾಧಿಕಾರಿಗಳು ತಿಳಿಸಿದ್ದಾರೆ....

ಮುಂಬೈಯ ಜುಹು ಪ್ರದೇಶದಲ್ಲಿ ಅಕ್ಟೋಬರ್ 18 ರಂದು ನಡೆದ ಟೈಗರ್ ಶ್ರಾಫ್ ಮೇಲಿನ ದಾಳಿಯ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಬಂಧಿತರಾದ ರೆಹಾನ್ ಅಲಿಯಾಸ್ ಸುಕ್ಕಾ, ಹೃತಿಕ್ ಕುರ್ಮಿ ಅಲಿಯಾಸ್ ರೋಷನ್ ಹಾಗೂ ಅಪ್ರಾಪ್ತ ವಯಸ್ಕನ ವಿಚಾರಣೆಯ ವೇಳೆ, ತಾವು ಬೇರೊಬ್ಬ ಪ್ರಭಾವಿ ವ್ಯಕ್ತಿಯನ್ನು ಹತ್ಯೆ ಮಾಡಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಭದ್ರತೆಯ ಕಾರಣದಿಂದ ಆ ಸೆಲೆಬ್ರಿಟಿಯನ್ನು ಸಮೀಪಿಸಲು ಸಾಧ್ಯವಾಗದಿದ್ದಾಗ, ಟೈಗರ್ ಶ್ರಾಫ್ ಅವರ ಮೇಲೆ ದಾಳಿ ನಡೆಸಲು ನಿರ್ಧರಿಸಿದರು. ರಾಜಸ್ಥಾನದ ಕೋಟಾದಲ್ಲಿ ಸೆರೆಸಿಕ್ಕ ಆರೋಪಿಗಳನ್ನು 48 ಗಂಟೆಗಳ ಟ್ರಾನ್ಸಿಟ್ ರಿಮಾಂಡ್ ಅಡಿಯಲ್ಲಿ ಮಹಾರಾಷ್ಟ್ರ ಪೊಲೀಸರು ಮುಂಬೈಗೆ ಕರೆದೊಯ್ಯುತ್ತಿದ್ದಾರೆ.




