ಹಿರಿಯಡ್ಕ: ಆರ್ಥಿಕ ಸಂಕಷ್ಟದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ
ಹಿರಿಯಡ್ಕ ಸಮೀಪದ ಕುಕ್ಕೆಹಳ್ಳಿ ಗ್ರಾಮದ ಜಡ್ಡು ಮೇಲ್ಮನೆ ಬಳಿಯ ಹಾಡಿಯಲ್ಲಿ ರಾಘವೇಂದ್ರ ಶೆಟ್ಟಿ ಎಂಬುವವರು ನೇಣು ಬಿಗಿದುಕೊಂಡು ಮೃತಪಟ್ಟಿರುವ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲ...

ಹಿರಿಯಡ್ಕ ಸಮೀಪದ ಕುಕ್ಕೆಹಳ್ಳಿ ಗ್ರಾಮದ ಜಡ್ಡು ಮೇಲ್ಮನೆ ಬಳಿಯ ಹಾಡಿಯಲ್ಲಿ ರಾಘವೇಂದ್ರ ಶೆಟ್ಟಿ ಎಂಬುವವರು ನೇಣು ಬಿಗಿದುಕೊಂಡು ಮೃತಪಟ್ಟಿರುವ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಮೃತ ರಾಘವೇಂದ್ರ ಶೆಟ್ಟಿ ಅವರು ಹುಬ್ಬಳ್ಳಿಯಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದರು. ಅವರ ಪತ್ನಿ ಸುನೀತಾ ಹಾಗೂ ಮಗಳು ಮೌಲ್ಯ ಕಳೆದ ಒಂದು ವಾರದಿಂದ ಹಾವಂಜೆ ಗ್ರಾಮದಲ್ಲಿರುವ ತವರು ಮನೆಯಲ್ಲಿದ್ದರು. ಅಕ್ಟೋಬರ್ 19ರಂದು ಬೆಳಿಗ್ಗೆ 11:00 ಗಂಟೆಗೆ ಸುನೀತಾ ಅವರು ತಮ್ಮ ಪತಿಗೆ ಕರೆ ಮಾಡಿ ಹುಬ್ಬಳಿಗೆ ಬರಲು ಟಿಕೆಟ್ ಬುಕ್ ಮಾಡುವಂತೆ ತಿಳಿಸಿದ್ದರು.
ನಂತರದ ಸಮಯದಲ್ಲಿ ರಾಘವೇಂದ್ರ ಅವರು ಪತ್ನಿಯ ಕರೆಗಳನ್ನು ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಪತ್ನಿ ಸುನೀತಾ ಅವರು ರಾಘವೇಂದ್ರ ಅವರ ಸಹೋದರ ರಾಜ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದರು. ರಾಜ ಶೆಟ್ಟಿ ಅವರು ರಾಘವೇಂದ್ರ ಅವರಿಗೆ ಕರೆ ಮಾಡಿದಾಗಲೂ ಅವರು ಉತ್ತರಿಸಿರಲಿಲ್ಲ.
ಇದರ ಬೆನ್ನಲ್ಲೇ ಸಂಬಂಧಿಕರು ಮತ್ತು ಮನೆಯವರು ಅಕ್ಟೋಬರ್ 20ರಂದು ಬೆಳಿಗ್ಗೆ 08:00 ಗಂಟೆಯಿಂದ ರಾಘವೇಂದ್ರ ಅವರ ಹುಡುಕಾಟ ನಡೆಸಿದ್ದರು. ಅಂದು ಸಂಜೆ ಸುಮಾರು 03:00 ಗಂಟೆ ವೇಳೆಗೆ ಕುಕ್ಕೆಹಳ್ಳಿ ಗ್ರಾಮದ ಜಡ್ಡು ಮೇಲ್ಮನೆ ಸಮೀಪದ ಹಾಡಿಯಲ್ಲಿ ರಾಘವೇಂದ್ರ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅತಿಯಾದ ಸಾಲ ಮತ್ತು ಹಣಕಾಸಿನ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ರಾಘವೇಂದ್ರ ಅವರು ಅಕ್ಟೋಬರ್ 19ರ ಬೆಳಿಗ್ಗೆ 11:00 ಗಂಟೆಯಿಂದ ಅಕ್ಟೋಬರ್ 20ರ ಮಧ್ಯಾಹ್ನ 03:00 ಗಂಟೆಯ ಮಧ್ಯಾವಧಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 36/2026 ಕಲಂ 194 ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಹಿರಿಯಡ್ಕ ಪೊಲೀಸ್ ಠಾಣೆ



