ಮಿಚಿಗನ್ ಸೆನೆಟ್ ಚುನಾವಣೆಯಲ್ಲಿ ಅಬ್ದುಲ್ ಜಯ: ಉತ್ತರಪ್ರದೇಶದಲ್ಲಿಯೂ ಗೆಲುವು ಸಾಧಿಸಲಿ ಎಂದ ಓವೈಸಿ
ನವದೆಹಲಿ: ಅಮೆರಿಕದ ಮಿಚಿಗನ್ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಅಬ್ದುಲ್ ಅಲ್-ಸಯೀದ್ ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯೊಬ್ಬರು ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ. ಇದು ನಮಗೆ ಉತ್ತಮ...

ಅಮೆರಿಕದ ಮಿಚಿಗನ್ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಅಬ್ದುಲ್ ಅಲ್-ಸಯೀದ್ ಜಯಭೇರಿ ಬಾರಿಸಿದ್ದಾರೆ. ಈ ಬೆಳವಣಿಗೆಯನ್ನು ಸ್ವಾಗತಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಇದೇ ಮಾದರಿಯಲ್ಲಿ ಉತ್ತರಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂದು ಕರೆ ನೀಡಿದ್ದಾರೆ. ರಾಜಕೀಯ ಗುರುತಿನ ಕಾರಣಕ್ಕೆ ನಿಂದನೆಗಳನ್ನು ಎದುರಿಸುತ್ತಿರುವವರಿಗೆ ಈ ಫಲಿತಾಂಶ ಸ್ಪೂರ್ತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಬ್ದುಲ್ ಎಂಬ ಹೆಸರನ್ನು ಅಣಕಿಸುವವರಿಗೆ ರಾಜಕೀಯ ಶಕ್ತಿಯ ಮೂಲಕ ಉತ್ತರ ನೀಡಬೇಕಾದ ಸಮಯ ಬಂದಿದೆ ಎಂದು ಓವೈಸಿ ಎಕ್ಸ್ ವೇದಿಕೆಯಲ್ಲಿ ತಿಳಿಸಿದ್ದಾರೆ.




