ದೆಹಲಿ ಮತ್ತು ಮುಂಬೈನಿಂದ ಅಮೆರಿಕಕ್ಕೆ ಏರ್ ಇಂಡಿಯಾ ನೇರ ವಿಮಾನ ಸೇವೆ ಪುನರಾರಂಭ
ನವದೆಹಲಿ: ಅಮೆರಿಕ ಪ್ರಯಾಣ ಬೆಳೆಸುವ ಭಾರತೀಯ ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಸ್ಥೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಮಧ್ಯಪ್ರಾಚ್ಯ ಉದ್ವಿಗ್ನತೆಯ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಮುಂಬೈ ಮತ್ತು ದೆಹಲಿಯಿಂದ ಅಮ...

ಇರಾಕ್ ವಾಯುಪ್ರದೇಶವು ಸಂಚಾರಕ್ಕೆ ಮುಕ್ತವಾಗಿರುವುದರಿಂದ ಏರ್ ಇಂಡಿಯಾ ಸಂಸ್ಥೆಯು ದೆಹಲಿ ಮತ್ತು ಮುಂಬೈನಿಂದ ಅಮೆರಿಕಕ್ಕೆ ನೇರ ವಿಮಾನ ಸೇವೆಯನ್ನು ಮರಳಿ ಆರಂಭಿಸಿದೆ. ಈ ಹೊಸ ಮಾರ್ಗದ ಮೂಲಕ ಪ್ರಯಾಣದ ಸಮಯವು 21 ಗಂಟೆಯಿಂದ 18 ಗಂಟೆಗೆ ಇಳಿಕೆಯಾಗಿದ್ದು, ರೋಮ್ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಲು ನಿಲುಗಡೆ ಮಾಡುವ ಅನಿವಾರ್ಯತೆ ತಪ್ಪಿದೆ. ಅಮೆರಿಕದ ಜೆಎಫ್‌ಕೆ ಮತ್ತು ನ್ಯೂವಾರ್ಕ್ ವಿಮಾನ ನಿಲ್ದಾಣಗಳಿಗೆ ತೆರಳುವ ನಾಲ್ಕು ವಿಮಾನಗಳು ಈಗ ಇರಾಕ್ ಮೇಲೆ ಹಾರಾಟ ನಡೆಸುತ್ತಿವೆ. ಈ ಬದಲಾವಣೆಯಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಯಲ್ಲಿ ಹೆಚ್ಚಿನ ನಮ್ಯತೆಯನ್ನು ಪಡೆದುಕೊಂಡಿದೆ.




