ದೀಗ್ ಜಿಲ್ಲೆಯಲ್ಲಿ ಪ್ರಿಯಕರನ ಮಾತು ಕೇಳಿ 13 ವರ್ಷದ ಅವಳಿ ಮಕ್ಕಳನ್ನು ಕೊಂದ ತಾಯಿ
ರಾಜಸ್ಥಾನದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ತನ್ನ ಪ್ರಿಯಕರನೊಬ್ಬ ಮಕ್ಕಳಿದ್ದಲ್ಲಿ ಮದುವೆಯಾಗುವುದಿಲ್ಲ ಎಂದು ಹೇಳಿದ ಕಾರಣಕ್ಕೆ ತಾಯಿಯೊಬ್ಬಳು ತನ್ನ 13 ವರ್ಷದ ಅವಳಿ ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ದಸರಾ...

ರಾಜಸ್ಥಾನದ ದೀಗ್ ಜಿಲ್ಲೆಯಲ್ಲಿ ತಾಯಿ ತನ್ನ 13 ವರ್ಷದ ಅವಳಿ ಗಂಡು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪತಿ ನಿಧನದ ನಂತರ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದು, ಮದುವೆಗೆ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ಪ್ರಿಯಕರ ಷರತ್ತು ವಿಧಿಸಿದ್ದನು. ಈ ಮಾತಿಗೆ ಮರುಳಾದ ತಾಯಿ ದಸರಾ ಹಬ್ಬದ ದಿನವೇ ಮಕ್ಕಳನ್ನು ಕೊಂದು ಶವಗಳನ್ನು ಹೊಲದಲ್ಲಿ ಎಸೆದಿದ್ದಳು. ಘಟನೆಯ ನಂತರ ತನಿಖೆ ಕೈಗೊಂಡ ಪೊಲೀಸರು ಕೇವಲ ಆರು ಗಂಟೆಗಳಲ್ಲಿ ಆರೋಪಿ ತಾಯಿಯನ್ನು ಬಂಧಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ತನಿಖೆ ಮುಂದುವರಿದಿದೆ.




